ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತ್‌ನಲ್ಲಿ ಕಳೆದ 9 ತಿಂಗಳಿಂದ ಎ.ಇ ಅಧಿಕಾರಿಯಿಲ್ಲದೆ ಅಭಿವೃದ್ದಿ ಕೆಲಸದಲ್ಲಿ ಮೊಟಕುಗೊಂಡಿದೆ. ಎ.ಇ ಜಾರಿ ಮಾಡಬೇಕಾದ 10 ಕೋಟಿ 18 ಲಕ್ಷ ರೂಗಳಲ್ಲಿ ಕೇವಲ 45 ಲಕ್ಷ ರೂ ಮಾತ್ರವೇ ಖರ್ಚಾಗಿದ್ದು, ಉಳಿದ ಮೊತ್ತದ ವಿವಿಧ ಅಭಿವೃದ್ದಿ ಕೆಲಸಗಳು ಬಾಕಿ ಉಳಿದು ಕೊಂಡಿದೆ.
ಎ.ಇ ಯವರನ್ನು ನೇಮಿಸಿವಂತೆ ಹಲವಾರು ಭಾರಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಹಿತ ಸಂಬಂಧಪಟ್ಟ ವಿವಿಧ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮುಂದಾಗಿರುವುದಾಗಿ ಪಂಚಾಯತ್ ಅಧಿಕೃತರು ತಿಳಿಸಿದ್ದಾರೆ.
ಎ.ಇ ರವನ್ನು ಕೂಡಲೇ ನೇಮಿಸುವಂತೆ ಆಗ್ರಹಿಸಿ ಪಂಚಾಯತ್ ಸಿಪಿಎಂ ನೇತೃತ್ವದ ಆಡಳಿತ ಸಮಿತಿ ವತಿಯಿಂದ ಡಿ.27ರಂದು ಬೆಳಿಗ್ಗೆ ಕಾಸರಗೋಡು ಪಂಚಾಯತ್ ಜೋಯಿಂಟ್ ಡೈರೆಕ್ಟರ್‌ರವರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪಂಚಾಯತ್ ಅಧ್ಯಕ್ಷೆ ಜಯಂತಿ, ಉಪಾಧ್ಯಾಕ್ಷೆ ಪುಷ್ಪಲಕ್ಷಿ, ಸ್ಟೇಂಡಿಂಗ್ ಕಮಿಟಿ ಚಯರ್‌ಮೆನ್ ಅಬ್ದುಲ್ ರಜಾಕ್ ಚಿಪ್ಪಾರ್, ಝಡ್.ಎ ಕಯ್ಯಾರ್ ಮಾತನಾಡಿದರು. ಸದಸ್ಯರಾದ ಶ್ರೀನಿವಾಸ ಭಂಡಾರಿ, ಅಬ್ದುಲ್ಲ.ಕೆ, ಸೀತಾರಾಮ ಶೇಟ್ಟಿ, ಸುನಿತಾ ವಲ್ಟಿ ಡಿ ಸೋಜಾ, ಅಶೋಕ್ ಭಂಡಾರಿ, ಗೀತಾ, ಮಮತಾ.ಎನ್, ಕಮಲಾ.ಪಿ, ರಹಮತ್ ಮೊದಲಾದವರು ನೇತೃತ್ವ ನೀಡಿದರು. ಇದು ಕೂಡಲೇ ಎ.ಇ ರವನ್ನು ನೇಮಿಸದಿದ್ದರೆ ಮುಂದೆ ಅನಿರ್ಧಿಷ್ಟಾವದಿ ಪ್ರತಿಭನೆ ನಡೆಸಲಾಗುವುದೆಂದು ತಿಳೀಸಿದ್ದಾರೆ.