ಮಂಜೇಶ್ವರ: ಮುರತ್ತಣೆಯ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ ವಾರ್ಷಿಕ ಮಹಾಸಭೆ ಜರಗಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಸಮಿತಿ ಅಧ್ಯಕ್ಷ ಉಮೇಶ್ ಮುರತ್ತಣೆ ಅಧ್ಯಕ್ಷತೆವಹಿಸಿದ್ದರು. ವರ್ಷಂಪ್ರತಿ ಕ್ರೀಡಾತ್ಮಕ, ಶೈಕ್ಷಣಿಕ, ಸಾಮಾಜಿಕ ಸೇವೆಗಳಲ್ಲದೆ ಧಾರ್ಮಿಕವಾಗಿಯೂ ಕಳೆದ ವರ್ಷ ನಡೆಸಿದ ಸೇವೆಯನ್ನು ಸಭೆಯಲ್ಲಿ ಅವಲೋಕನ ನಡೆಸಲಾಯಿತು.
ನೂತನ ಸಾಲಿನ ಅಧ್ಯಕ್ಷರಾಗಿ ಗಣೇಶ್ ಮುರತ್ತಣೆ, ಪ್ರಶಾಂತ್ ಅರಿಬೈಲ್ (ಉಪಾಧ್ಯಕ್ಷ), ನಿತೇಶ್ ಬೇಕರಿ (ಕಾರ್ಯದರ್ಶಿ), ಕಿಸಾನ್ ಅರಿಂಗುಲ (ಜತೆ ಕಾರ್ಯದರ್ಶಿ), ಆಶೀಶ್ ಮದಕ (ಕ್ರೀಡಾ ಕಾರ್ಯದರ್ಶಿ), ಲೋಕೇಶ್ ಮುರತ್ತಣೆ (ಕ್ರೀಡಾ ಸಹ ಕಾರ್ಯದರ್ಶಿ), ಪ್ರತಾಪ್ ಮುರತ್ತಣೆ(ಕೋಶಾಧಿಕಾರಿ)ಆಯ್ಕೆ ಮಾಡಲಾಯಿತು. ಫೆ.25ರಂದು ಕ್ಲಬ್ಬಿನ ವಾರ್ಷಿಕೋತ್ಸವ ನಡೆಸಲು ತೀರ್ಮಾನಿಸಲಾಯಿತು. ಶಿವಕುಮಾರ್ ಸ್ವಾಗತಿಸಿ ರಘುನಾಥ ವಂದಿಸಿದರು