ವರ್ಷಾವಧಿ ಜಾತ್ರೆಯು ಮಾಗಣೆ ತಂತ್ರಿಯವರ ಶ್ರೀ ಗಣಪತಿ ಮುಚ್ಚಿನ್ನಾಯರ ನೇತೃತ್ವದಲ್ಲಿ ಜರಗಲಿರುವುದು. ದಿನಾಂಕ 06-01-2024ನೇ ಶನಿವಾರ ಪೂರ್ವಾಹ್ನ ಗಂಟೆ 9-00ರಿಂದ ಸಾಮೂಹಿಕ ಪ್ರಾರ್ಧನೆ, ಸಾರಿ ಹಾಕುವುದು, ಗೊನೆ ಮುಹೂರ್ತ, ಕೋಳಿಕುಂಟ, ಸ್ವಸ್ತಿ ಪುಣ್ಯಾಹವಾಚನ , ನಾಗಬ್ರಹ್ಮರಿಗೆ ಮತ್ತು ನಾಗದೇವರಿಗೆ ತನು ತಂಬಿಲ ಮಹಾಪೂಜೆ ನವಕಲಾಶ, ನವಕ ಪ್ರಧಾನ ಹೋಮ, ಕಲಾಶಾಭಿಷೇಕ ಪರ್ವಾರಾಧನೆ ಮಹಾಪೂಜೆ ಇತ್ಯಾದಿ ಮಂಗಳ ಕಾರ್ಯಗಳು ಜರಗಲಿರುವುದು.

ಈ ದಿನ ಸಾಯಂಕಾಲ ಗಂಟೆ 6.00ಕ್ಕೆ ಸರಿಯಾಗಿ ನುರ್ತಾಡಿ ಬರ್ಕೆಗುತ್ತು ಮನೆಯಿಂದ ಅಡಿಮರಾಯನ ಭಂಡಾರವು ಹಾಗೂ ಮಾಲಾಭೆ, ಬವಂತಬೆಟ್ಟು, ಅಟ್ಲೋಟ್ಲುಗುತ್ತು ರಾಜ ಮಾರ್ಗದಲ್ಲಿ ಕುಂಟಾಲಪಲ್ಕೆ ದೇವಾಸ್ಥಾನಕ್ಕೇ ಹೊರಡುವುದು. ಸಾಯಂಕಾಲ ಗಂಟೆ 6.30ಕ್ಕೆ ಸರಿಯಾಗಿ ಕೊಡಮಣಿತ್ತಾಯ ದೈವದ ಭಂಡಾರವು ಕುಂಟಾಲಪಲ್ಕೆಯ ಕೊಡಮಣಿತ್ತಾಯ ದೇವಾಸ್ಥಾನದಿಂದ ಹಾಗೂ ಕಲ್ಕುಡ ಕಲ್ಲುರ್ಟಿ ದೈವಗಳ ಭಂಡಾರವು ಕುಂಟಾಲಪಲ್ಕೆಯ ಕಲ್ಕುಡ ಕಲ್ಲುರ್ಟಿ ಸಾನಿಧ್ಯದಿಂದ ಹೊರಟು ಕುಂಟಾಲಪಲ್ಕೆಯಲ್ಲಿ ಗ್ರಾಮ ದೈವಗಳ ಮಹಾದ್ವಾರದ ಬಳಿ ಅಡಿಮಾರಾಯನ ಭಂಡಾರದೋಡ ಗೂಡಿ 7 ಗಂಟೆಗೆ ಸರಿಯಾಗಿ ಕುಂಟಾಲಪಲ್ಕೆಯಲ್ಲಿ ಗೋಪೂರ ಪ್ರವೇಶಿಸಿ, ತೋರಣ ಮುಹೂರ್ತ ನೆರವೇರಿಸುವುದು. ರಾತ್ರಿ ಗಂಟೆ 7.00ರಿಂದ 10.00ರ ತನಕ ವಿವಿಧ ಸಾಂಸ್ಕೃತಿಕ ವೈವಿಧ್ಯ ಮಯ ಕಾರ್ಯಕ್ರಮ ನಡೆಯಲಿರುವುದು. ಹಾಗೂ ರಾತ್ರಿ 9 ಗಂಟೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು.
ರಾತ್ರಿ ಗಂಟೆ 11.00ರಿಂದ ಕೊಡಮಣಿತ್ತಾಯ ದೈವದ ಹಾಗೂ ಕಲ್ಕುಡ ಕಲ್ಲುರ್ಟಿ ದೈವಗಳ ಗಗ್ಗರ ಸೇವೆ ಜರಗಲಿರುವುದು. ರಾತ್ರಿ ಗಂಟೆ 3.00ಕ್ಕೆ ಮಹಾಮಾಯಿ ದರ್ಶನ ಮತ್ತು ಪೂಜೆ ನಡೆಯಲಿರುವುದು. ರಾತ್ರಿ 3.30ಕ್ಕೆ ಮಾರಿ ಓಡಿಸುವುದು. ಪ್ರಾಥ ಕಾಲ ಗಂಟೆ 4.00ಕ್ಕೆ ದೈವಸ್ಥಾನದಲ್ಲಿ ಹರಕೆಗಳ ಸ್ವೀಕಾರ . ತಾರೀಕು 7-1-2024ನೇ ಆದಿತ್ಯವಾರ ಪೂರ್ವಾಹ್ನ ಗಂಟೆ 5.00ಕ್ಕೆ ಅಡಿಮಾರಾಯ ದೈವದ ಗಗ್ಗರಸೇವೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಹಾಗೂ ಬೆಳಗ್ಗೆ ಎಂಟು ಗಂಟೆಗೆ ಬಂಡಾರ ನಿರ್ಗಮನ.