ಮಂಜೇಶ್ವರ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಕಾಡು ಹಂದಿಗಳ ಉಪಟಳದಿಂದ ಭತ್ತದ ಕೃಷಿ ಸಹಿತ ಇತರ ಕೃಷಿ ನಾಶಗೊಂಡು ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಮಾಣಿಂಜ ಸಮೀಪದ ಅಕ್ಕರೆ, ಅಂಬಿತ್ತಡಿ, ಪೈವಳಿಕೆ ಪಂಚಾಯತ್ ವ್ಯಾಪ್ತಿಯಗೊಳಪಟ್ಟ ಕುಡಾಲು ಬಯಲು, ಮೇರ್ಕಳ, ಚೇವಾರು ಬಯಲು ಪ್ರದೇಶದಲ್ಲಿ ಬತ್ತದ ಕೃಷಿಯನ್ನು ವ್ಯಾಪಕ ನಾಶಗೊಳಿಸುತ್ತಿರುವುದಾಗಿ ದೂರಲಾಗಿದೆ.
ಅಲ್ಲದೆ ಬಾಳೆ ಸಹಿತ ತರಕಾರಿ ಕೃಷಿಯನ್ನು ನಾಶಮಾಡುತ್ತಿದೆ. ರಾತ್ರಿ ಹೊತ್ತಿನಲ್ಲಿ ಕಾಡುಹಂದಿಗಳ ಗುಂಪು ಬಂದು ಗದ್ದೆಯಲ್ಲಿರುವ ಬತ್ತದ ಕೃಷಿ ಸಹಿತ ಇತರ ಗಿಡಗಳನ್ನು ನಾಶ ಮಾಡುವುದರಿಂದ ಕೃಷಿಕರಲ್ಲಿ ಆತಂಕಿತರಾಗಿದೆ.
ನಿದ್ರೆಬಿಟ್ಟು ರಾತ್ರಿ ಹಂದಿಗಳನ್ನು ಕಾಯುಬೇಕಾದ ಪರಿಸ್ಥಿತಿ ಉಂಟಾಗಿರುವುದಾಗಿ ಕೃಷಿಕರು ತಿಳಿಸಿದ್ದಾರೆ. ಈ ಬಗ್ಗೆ ಈ ಹಿಂದೆಯೇ ಅಧಿಕಾರಿಗಳಿಗೆ ದೂರ ನೀಡಿರುವುದಾಗಿ ಕುಡಾಲು ಪ್ರದೇಶದ ಕೃಷಿಕರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ವರ್ಗ ಕ್ರಮಕೈಗೊಳ್ಳಬೇಕೆಂದು ಕೃಷಿಕರು ಒತ್ತಾಯಿಸಿದ್ದಾರೆ.