ಜ.13: ನೂತನವಾಗಿ ನಿರ್ಮಾಣಗೊಂಡ ತರಗತಿ ಕೊಠಡಿ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

Share with

ಬಂಟ್ವಾಳ: ನರಿಕೊಂಬು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ನೂತನವಾಗಿ ನಿರ್ಮಾಣಗೊಂಡ ವಿವೇಕ ತರಗತಿ ಕೊಠಡಿ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಜ.13ರಂದು ಜರಗಲಿರುವುದು.

ನೂತನವಾಗಿ ನಿರ್ಮಾಣಗೊಂಡ ತರಗತಿ ಕೊಠಡಿ ಉದ್ಘಾಟನೆ

ಬೆಳಿಗ್ಗೆ ವೇದಮೂರ್ತಿ ಕೃಷ್ಣರಾಜ ಭಟ್ ಕರ್ಬೆಟ್ಟು ಧ್ವಜಾರೋಹಣ ಮಾಡಲಿದ್ದು ನಂತರ ಆಕರ್ಷಕ ತಾಳಬದ್ದ ವ್ಯಾಯಾಮ ಹಾಗೂ ಅಮೋಘ ಕಸರತ್ತುಗಳು ನಡೆಯಲಿದೆ.

ಸಾಯಂಕಾಲ 5 ಗಂಟೆಗೆ ವಿವೇಕ ಯೋಜನೆಯ ಅಡಿಯಲ್ಲಿ ನಿರ್ಮಾಣಗೊಂಡ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕರ್ನಾಟಕ ವಿಧಾನ ಸಭೆಯ ವಿಧಾನ ಸಭಾಧ್ಯಕ್ಷರಾದ ಯು ಟಿ ಖಾದರ್ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘನ ಉಪಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ದಿನೇಶ್ ಗುಂಡೂರಾವ್ ವಿವೇಕ ತರಗತಿ ಕೊಠಡಿಯ ಉದ್ಘಾಟನೆ ನೆರವೇರಿಸಲಿದ್ದು ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಲೋಕಸಭಾ ಸಂಸದರಾದ ನಳಿನ್ ಕುಮಾರ್ ಕಟೀಲ್, ರಾಜ್ಯಸಭಾ ಸಂಸದರಾದ ವೀರೇಂದ್ರ ಹೆಗ್ಡೆ, ಕರ್ನಾಟಕ ರಾಜ್ಯ ವಿಧಾನಪರಿಷತ್ ಸದಸ್ಯರುಗಳಾದ ಕೋಟ ಶ್ರೀನಿವಾಸ್ ಪೂಜಾರಿ, ಬಿ ಎಂ ಫಾರೂಕ್, ಹರೀಶ್ ಕುಮಾರ್, ಎಸ್ ಎಲ್ ಭೋಜೆ ಗೌಡ, ಪ್ರತಾಪ್ ಸಿಂಹ ನಾಯಕ್, ಮಂಜುನಾಥ ಬಂಡಾರಿ ಭಾಗವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್, ಉಪಾಧ್ಯಕ್ಷರಾದ ಮೋಹಿನಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿನೀತಾ ಪುರುಷೋತಮ್, ರಂಜಿತ್ ಕೆದ್ದೇಲು, ಚಿತ್ರಾವತಿ, ಪ್ರಕಾಶ್ ಮಾಡಿಮುಗೇರು,ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ,ಕ್ಷೇತ್ರ ಸಮನ್ವಯ ಅಧಿಕಾರಿ ರಾಘವೇಂದ್ರ ಬಲ್ಲಾಳ್, ದೈಹಿಕ ಶಿಕ್ಷಣ ಪರಿವಿಕ್ಷಕ ವಿಷ್ಣು ನಾರಾಯಣ ಹೆಬ್ಬಾರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ ಎ, ಶಿಕ್ಷಣ ಸಂಯೋಜಕರಾದ ಸುಜಾತ ಕುಮಾರಿ, ಪ್ರತಿಮಾ ವೈ ವಿ, ಸುಧಾ, ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಸತೀಶ್ ರಾವ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಬಂಟ್ವಾಳ ಸಂಘದ ಅಧ್ಯಕ್ಷ ಉಮಾನಾಥ್ ರೈ ಮೆರಾವು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಂಟ್ವಾಳದ ಅಧ್ಯಕ್ಷ ನವೀನ್ ಪಿ ಎಸ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಬಂಟ್ವಾಳದ ಕಾರ್ಯದರ್ಶಿ ಸಂತೋಷ್ ಎಸ್, ಜಗನಾಥ್ ಬಂಗೇರ ನಿರ್ಮಾಲ್, ವೇದಮೂರ್ತಿ ಜನಾರ್ಧನ ವಾಸುದೇವ್ ಭಟ್, ಅಗ್ರಜ ಬಿಲ್ಡರ್ಸ್ ಮಂಗಳೂರಿನ ಸಂದೇಶ್ ಶೆಟ್ಟಿ, ಯಶೋದರ ಕರ್ಬೆಟ್ಟು, ಪುರುಷೋತಮ ಸಾಲಿಯಾನ್, ಪ್ರಕಾಶ್ ಕಾರಂತ್, ರಘು ಸಫಲ್ಯ, ಜೀವನ್ ಲಾಯ್ದ ಪಿಂಟೋ, ಕೇಶವ ಶಾಂತಿ, ಅಶೋಕ್ ಶೆಟ್ಟಿ ಸರಪಾಡಿ, ಸುಲೈಮಾನ್ ಪಿ ನೆಹರು ನಗರ, ಮೋಹಡಾಸ್ ಕೊಟ್ಟಾರಿ, ಮಾದವ ಕುಲಾಲ್ ಶೇಡಿಗುರಿ, ಸದಾಶಿವ ಸನಿಲ್ ಬೊಂಡಲ, ಹರೀಶ್ ಕುರ್ಚಿಪಲ್ಲ, ಜಗದೀಶ್ ಬೋರುಗುಡ್ಡೆ, ಪ್ರವೀಣ್ ಭಂಡಾರಿ ನಾಯಿಲ, ನಾಗೇಶ್ ಸಾಲಿಯಾನ್ ನರಿಕೊಂಬು, ಪ್ರೇಮನಾಥ್ ಶೆಟ್ಟಿ ಅಂತರ, ದಿನೇಶ್ ಪಂಡಿತ್ ಭಾಗೀರಥಿ ಕೋಡಿ, ಗುರುದತ್ ಭಟ್ ಮೊಗರ್ನಾದು, ಸುಧಾ ಜೋಶಿ, ಪುಷ್ಪಲತಾ, ಯಶ್ವಿತಾ, ನಾರಾಯಣ ನಾಯ್ಕ್, ವೆಂಕಟೇಶ್ ಶಾಂತಿ ರಾಯಸ, ರೀಮಾ ಮಧುರಾಜ್, ಪ್ರಮೋದ್ ಬೋಳಾರ್, ಶಾರದಾ ಬೊಕ್ಕಸ, ಪ್ರಸಾದ್ ಗಾಣಿಗ ಕರ್ಬೆಟ್ಟು, ಮನೋಜ್ ನಿರ್ಮಾಲ್, ಪ್ರವೀಣ್ ಸ್ವಾಮೀಜಿ ಜನತಾಗ್ರಹ, ಚಂದ್ರಹಾಸ ಕೋಡಿ ಮಜಲ್, ಕೃಷ್ಣ ಕುಲಾಲ್ ಶೇಡಿಗುರಿ, ಮೊದಲಾದವರು ಗೌರವ ಉಪಸ್ಥಿತಲಿರುವರು.

ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯಕ್ಷದ್ರುವ ಪಟ್ಲ ಪೌಂಡೇಶನ್ ಇದರ ಯಕ್ಷ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಯಕ್ಷಗಾನ ಗುರುಗಳಾದ ಓಂ ಪ್ರಕಾಶ್ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳಿಂದ “ಜಾಂಬವತಿ ಕಲ್ಯಾಣ” ಯಕ್ಷಗಾನ ನಡೆಯಲಿರುದೆಂದು ಶಾಲಾಭಿರುದ್ಧಿ ಸಮಿತಿಯ ಅಧ್ಯಕ್ಷ ರವಿ ಅಂಚನ್ ತಿಳಿಸಿರುತ್ತಾರೆ.


Share with

Leave a Reply

Your email address will not be published. Required fields are marked *