ಮಂಗಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಅವ್ಯವಹಾರದ ವಿರುದ್ದ ಬಿಜೆಪಿ ಧರಣಿ ಸತ್ಯಾಗ್ರಹ

Share with

ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತ್ನಲ್ಲಿ ನಡೆಯುವ ಅವ್ಯವಹಾರದ ವಿರುದ್ದ ಭಾರತೀಯ ಜನತಾ ಪಕ್ಷ ಮಂಗಲ್ಪಾಡಿ ಪಂಚಾಯತ್ ಸಮಿತಿ ಆಶ್ರಯದಲ್ಲಿ ಜ.10ರಂದು ಬೆಳಿಗ್ಗೆ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ಧರಣಿ ಸತ್ಯಾಗ್ರಹ ನಡೆಯಿತು.

ಮಂಗಲ್ಪಾಡಿ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ಧರಣಿ ಸತ್ಯಾಗ್ರಹ ನಡೆಯಿತು.

ಪರಿಶಿಷ್ಟ ಜಾತಿ ವಿಭಾಗದವರಿಗೆ ಕಲಿಕಾ ಭಾಗವಾಗಿ ಗ್ರಾಮ ಪಂಚಾಯತ್ ನಿಂದ ಕೊಡಲ್ಪಟ್ಟ ಕಂಪ್ಯೂಟರ್, ಲ್ಯಾಪ್ ಟಾಪ್ ನಿಜವಾದ ಅರ್ಜಿದಾರರಿಗೆ ಕೊಡದೆ ಅವರ ನಕಲಿ ಸಹಿಯೊಂದಿಗೆ ಖರೀದಿಸಿ ಮೋಸಗೊಳಿಸಿದ ಕುತಂತ್ರ ಅವ್ಯವಹಾರದ ವಿರುದ್ದ ನಡೆದ ಪ್ರತಿಭಟನೆಯನ್ನು ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ವಿ ರವೀಂದ್ರನ್ ಉದ್ಘಾಟಿಸಿದರು.

ಅವ್ಯವಹಾರದ ವಿರುದ್ದ ನಡೆದ ಪ್ರತಿಭಟನೆ

ಬಿಜೆಪಿ ಪಂಚಾಯತ್ ಸಮಿತಿ ಉಪಾಧ್ಯಕ್ಷ ಸುರೇಶ್ ಮುಟ್ಟಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರೈ, ಕಾರ್ಯದರ್ಶಿ ಮನು ಲಾಲ್ ಮೇಲತ್, ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಕುಮಾರ್ ಮಯ್ಯ, ಅನಿಲ್ ಕುಮಾರ್ ಕೆ.ಪಿ, ಪಂಚಾಯತ್ ಸದಸ್ಯರಾದ ಸುಧಾ ಗಣೇಶ್, ರೇವತಿ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬಂದ್ಯೋಡು ಸ್ವಾಗತಿಸಿ, ಕಾರ್ಯದರ್ಶಿ ಪ್ರವೀಣ್ ವಂದಿಸಿದರು.


Share with

Leave a Reply

Your email address will not be published. Required fields are marked *