ಸೋಂಕಾಲು ಜಂಕ್ಷನ್‌ನಲ್ಲಿ ಹೆಚ್ಚುತ್ತಿರುವ ಅಪಘಾತಗಳು: ಹಂಪ್ ನಿರ್ಮಿಸಲು ಊರವರ ಒತ್ತಾಯ

Share with

ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಸೋಂಕಾಲು ಜಕ್ಷನ್‌ನಲ್ಲಿ ವಾಹನಗಳ ಅಪಘಾತ ವ್ಯಾಪಕಗೊಳ್ಳುತ್ತಿರುವುದು ಊರವರನ್ನು ಆತಂಕಕ್ಕೀಡು ಮಾಡಿದೆ.

ಕೈಕಂಬ-ಬಾಯಾರು ರಸ್ತೆಯ ಸೋಂಕಾಲು ಜಕ್ಷನ್‌

ಕಳೆದ ಜ.7ರಂದು ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದು ಕುಳೂರು ಉಮಿಕಳ ನಿವಾಸಿ ಮೊಹಮ್ಮದ್ ಹನೀಫ್ ಮೃತಪಟ್ಟಿದ್ದಲ್ಲದೆ. ಈ ಹಿಂದೆ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ಪುಳಿಕುತ್ತಿಯಲ್ಲಿ ವಾಸವಾಗಿರುವ ವೆಂಕಟ್ರಮಣ ಆಚಾರ್ಯ ಹಾಗೂ ಸ್ಕೂಟರ್ ಕಾರು ಡಿಕ್ಕಿಯಾಗಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಅಲ್ಲದೆ ಸಣ್ಣಪುಟ್ಟ ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕಾಲಿನಿಂದ ಕೊಡಂಗೆ-ಪ್ರತಾಪನಗರ ರಸ್ತೆಗೆ ಸಂಗಮಿಸುವ ಪರಿಸರದಲ್ಲಿ ಹಂಪ್ ಸ್ಥಾಪಿಸಿ ವಾಹನಗಳ ವೇಗವನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿ ಮಂಗಲ್ಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೆ.ಪಿ ವಲ್ಸರಾಜ್ ರವರ ನೇತೃತ್ವದಲ್ಲಿ ಊರವರು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ರವರಿಗೆ ಮನವಿಯನ್ನು ನೀಡಿದ್ದು, ಶೀಘ್ರದಲ್ಲಿ ಕ್ರಮಕೈಗೊಳ್ಳುವುದಾಗಿ ಶಾಸಕರು ಭರವಸೆಯನ್ನು ನೀಡಿದ್ದಾರೆ.

ಇಲ್ಲಿ ನಿತ್ಯ ಜನನಿಬಿಡ ಪ್ರದೇಶವಾಗಿದ್ದು, ವಾಹನಗಳು ಅಮಿತ ವೇಗದಲ್ಲಿ ಸಂಚರಿಸುವುದರಿಂದ ರಸ್ತೆ ದಾಟಲು ಭಾರೀ ಆತಂಕ ಉಂಟಾಗಿದೆ. ಬಾಯಾರಿನಿಂದ ಕೈಕಂಬ ತನಕ ರಸ್ತೆಗೆ ಮರು ಡಾಮಾರಿಕರಣಗೊಳಿಸಲಾಗುತ್ತಿದೆ. ಈ ವೇಳೆ ವಿವಿಧೆಡೆಗಳಿಂದ ತೆರವುಗೊಳಿಸಿದ ಹಂಪ್‌ನ್ನು ಕೂಡಾ ಸ್ಥಾಪಿಸಲು ಊರವರು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *