ಮಂಜೇಶ್ವರ: ಹೊಸಂಗಡಿ-ಆನೆಕಲ್ಲು ಲೋಕೋಪಯೋಗಿ ಇಲಾಖೆಯ ದುರ್ಗಿಪಳ್ಳ, ಕಡಂಬಾರು ಪರಿಸರದ ರಸ್ತೆ ಬದಿಯಲ್ಲಿ ಅಲ್ಲಲ್ಲಿ ತ್ಯಾಜ್ಯ ರಾಶಿಗಳು ಕಂಡುಬರುತ್ತಿದ್ದು, ಮಳೆಗೆ ದುರ್ವಾಸನೆಯಿಂದ ಈ ಪ್ರದೇಶದ ವಾಹನ ಸಂಚಾರ ಸಮಸ್ಯೆಯಾಗಿರುವುದಾಗಿ ಸಾರ್ವಜನಿಕರು ದೂರಿದ್ದಾರೆ.
ಪ್ಲಾಸ್ಟಿಕ್ ಚೀಲದಲ್ಲಿ ವಿವಿಧ ತ್ಯಾಜ್ಯಗಳನ್ನು ತಂದು ಉಪೇಕ್ಷಿಸಲಾಗುತ್ತಿದೆ. ಕಡಂಬಾರು ತಿರುವುನಲ್ಲಿ ರಸ್ತೆಯ ಇಕ್ಕೆಡೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹರಡಿಕೊಂಡಿದೆ. ಮಂಜೇಶ್ವರ ಹಾಗೂ ಮೀಯ ಪಂಚಾಯತ್ ಸಂಗಮಿಸುವ ಪ್ರದೇಶವಾಗಿರುವುದಾಗಿ ಹೇಳಲಾಗುತ್ತಿದೆ.
ತ್ಯಾಜ್ಯ ಎಸೆಯುವವರ ವಿರುದ್ದ ಕ್ರಮಕೈಗೊಳ್ಳಲು ಈ ಹಿಂದೆ ಕಡಂಬಾರಿನಲ್ಲಿ ಸಿಸಿ ಕ್ಯಾಮರವನ್ನು ಸ್ಥಾಪಿಸಲಾಗಿದ್ದು, ಬಳಿಕ ಅಲ್ಲಿ ತ್ಯಾಜ್ಯ ಉಪೇಕ್ಷಿಸುವುದು ನಿಂತು ಹೋಗಿದ್ದು, ಇದೀಗ ಸಿಸಿ ಇಲ್ಲದ ಕಡೆಗಳಲ್ಲಿ ತ್ಯಾಜ್ಯ ಉಪೇಕ್ಷಿಸಲಾಗುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಸಂಬಂಧಪಟ್ಟ ಪಂಚಾಯತ್ ಅಧಿಕೃತರು ಅಲ್ಲಲ್ಲಿ ಸಿಸಿ ಕ್ಯಾಮರಗಳನ್ನು ಸ್ಥಾಪಿಸಿ ತ್ಯಾಜ್ಯ ಉಪೇಕ್ಷಿಸುವವರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.