ಮಂಜೇಶ್ವರ: ಹೊಳೆಯಲ್ಲಿ ಜೀರ್ಣಾವಸ್ಥೆ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ನಡೆದಿದೆ.
ಬಂಗ್ರಮಂಜೇಶ್ವರ ಕೊಪ್ಪಳ ಹೊಳೆಯಲ್ಲಿ ಜ.10ರಂದು ಮಧ್ಯಾಹ್ನ ಮೃತದೇಹ ಸ್ಥಳೀಯರ ಗಮನಕ್ಕೆ ಬಂದಿದೆ. 40ರಿಂದ 50 ವರ್ಷ ಪ್ರಾಯ ಅಂದಾಜಿಸುವ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಮೃತದೇಹ ನಗ್ನ ಸ್ಥಿತಿಯಲ್ಲಿ ಜೀರ್ಣಾವಸ್ಥೆಯಲ್ಲಿತ್ತು. ಹಲವು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಮಂಜೇಶ್ವರ ಎಸ್.ಐ ಪ್ರಶಾಂತ್ ನೇತೃತ್ವದ ಪೋಲೀಸರು ತಲುಪಿ ಮೃತದೇಹದ ಪಂಚನಾಮೆ ನಡೆಸಿ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿ ಮೃತದೇಹದ ಗುರುತು ಪತ್ತೆಗಾಗಿ ಶ್ರಮಿಸುತ್ತಿದ್ದಾರೆ.