ಉಳ್ಳಾಲ: ಮಾದಕ ವಸ್ತು ಎಂಡಿಎಂಎ ಅನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಯುವಕನನ್ನು ಮಂಗಳೂರು ಆ್ಯಂಟಿ ಡ್ರಗ್ ಟೀಮ್‌ನ ತಂಡ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೋಟೆಕಾರು ಕೆ.ಸಿ ರೋಡ್ ನಿವಾಸಿ ಆಸೀಫ್(27)ಎಂದು ಗುರುತಿಸಲಾಗಿದ್ದು, ಕೋಟೆಕಾರ್ ಗ್ರಾಮದ ಕೆ.ಸಿ ನಗರ ಯು.ಜಿ. ಗೇಟ್‌ರೋಡ್‌ನ ಸಾರ್ವಜನಿಕ ರಸ್ತೆ ಬದಿಯ ಖಾಲಿ ಜಾಗದ ಬಳಿ ದಾಳಿ ನಡೆಸಿ ಈತನನ್ನು ಬಂಧಿಸಿದ್ದಾರೆ.
ಆರೋಪಿಯಿಂದ 4.41ಗ್ರಾಂ ಎಂಡಿಎಂಎ ಸಹಿತ ಸಾಗಾಟಕ್ಕೆ ಬಳಸಿದ್ದ ಬೈಕ್ ಹಾಗೂ ಸುಮಾರು 68 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.