ಮಂಜೇಶ್ವರ: ಉದ್ಯಾವರ ಪಡ್ಯಾರ ಮನೆ ಗ್ರಾಮ ಚಾವಡಿ ಕುಟುಂಬಸ್ಥರು, ಕುಂಜತ್ತೂರು ಇಲ್ಲಿ 12ನೇ ವಾರ್ಷಿಕ ಧರ್ಮ ದೈವಗಳ ನೇಮ ಮತ್ತು ಪರಿವಾರ ದೈವಗಳಿಗೆ ಕೋಲ ಜ.20 ಮತ್ತು 21ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
20ರಂದು ಬೆಳಿಗ್ಗೆ 9ರಿಂದ ಗಣಪತಿ ಹವನ, ನಾಗದೇವರಿಗೆ ದೀಪಾರಾಧನೆ, ಶ್ರೀ ವೆಂಕಟರಮಣ ದೇವರ ಪಾನಕ ಪೂಜೆ ಮತ್ತು ಅರಸು ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ, 2ರಿಂದ ಧೂಮಾವತಿ ಬಂಟ, ಮಹಿಷಂದಾಯ ದೈವಗಳ ನೇಮ, ರಾತ್ರಿ 11ರಿಂದ ಕಲ್ಲುರ್ಟಿ, ಪಂಜುರ್ಲಿ ಮತ್ತು ಕೊರತಿ ದೈವಗಳ ಕೋಲ, 21ರಂದು ರಾತ್ರಿ 6ರಿಂದ ಕಲ್ಲುರ್ಟಿ, ಪಂಜುರ್ಲಿ ಮತ್ತು ಕೊರತಿಗೆ ಅಗೆಲು ಸೇವೆ ನಡೆಯಲಿದೆ.