ಉಪ್ಪಳ: ಕುಬಣೂರು ಶ್ರೀರಾಮ ಐಡೆಡ್ ಅಪ್ಪರ್ ಪ್ರೈಮರಿ ಶಾಲಾ ವರ್ಧಂತ್ಯುತ್ಸವ ಜ.20ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಅಂದು ಬೆಳಿಗ್ಗೆ9.30ಕ್ಕೆ ಮಂಗಲ್ಪಾಡಿ ಪಂಚಾಯತ್ ಸದಸ್ಯ ವಿಜಯ ಕುಮಾರ್ ರೈ ದ್ವಜಾರೋಹಣಗೈಯ್ಯುವರು.
ಬೆಳಿಗ್ಗೆ 10ಕ್ಕೆ ಶಾಲಾ ವಿಧ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, 11 ಗಂಟೆಗೆ ನಡೆಯುವ ವರ್ಧಂತಿ ಸಭೆಯನ್ನು ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್ ಉದ್ಘಾಟಿಸುವರು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಗಣ್ಯರಾದ ವಿಜಯ ಕುಮಾರ್, ಶಶಿಕಲ ಜಿ ಮಯ್ಯ, ವಿವೇಕ್ ಭಂಡಾರಿ ಸಣ್ಣತ್ತಡ್ಕ ಮೊದಲಾದವರು ಶುಭಾಂಶನೆಗೈಯ್ಯುವರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದೆ. ರಾತ್ರಿ 8ರಿಂದ ಶಾಲಾ ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.