ಉಪ್ಪಳ: ನಾಟಕ ನೋಡಲು ತೆರಳಿದ್ದ ಯುವಕನ ಮೃತದೇಹ ಹಿತ್ತಿಲಿನಲ್ಲಿ ನಿಗೂಡ ಸ್ಥಿತಿಯಲ್ಲಿ ಪತ್ತೆ

Share with

ಉಪ್ಪಳ: ನಾಟಕ ನೋಡಲು ತೆರಳಿದ ಯುವಕನ ಮೃತದೇಹ ಹಿತ್ತಿಲಿನಲ್ಲಿ ನಿಗೂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ನಾಟಕ ನೋಡಲು ತೆರಳಿದ್ದ ಯುವಕನ ಮೃತದೇಹ ಹಿತ್ತಿಲಿನಲ್ಲಿ ನಿಗೂಡ ಸ್ಥಿತಿಯಲ್ಲಿ ಪತ್ತೆ

ಕುಬಣೂರು ಶಾಂತಿಮೂಲೆ ನಿವಾಸಿ [ದಿ] ಬಾಬು ಎಂಬವರ ಪುತ್ರ ಅಂಗವಿಕಲ ನಾರಾಯಣ [26] ಎಂದು ಗುರುತಿಸಲಾಗಿದೆ.

ಈತನ ಮೃತದೇಹ ಜ.14ರಂದು ಸಂಜೆ ಬೇಕೂರು ಸರಕಾರಿ ಶಾಲಾ ರಸ್ತೆಯ ಖಾಸಾಗಿ ಹಿತ್ತಿಲಿನಲ್ಲಿ ಪತ್ತೆಯಾಗಿದೆ. ಜ.13ರಂದು ರಾತ್ರಿ 7ಗಂಟೆಗೆ ಮನೆಯಿಂದ ಬೇಕೂರು ಶಾಲಾ ವಠಾರದಲ್ಲಿ ಸ್ಥಳೀಯ ಸಂಸ್ಥೆಯ ನಾಟಕ ಪ್ರದರ್ಶನ ನಡೆಯುವಲ್ಲಿಗೆ ತೆರಳಿದ್ದಾರೆ.

ಅಂದು ರಾತ್ರಿ ನಾಟಕದ ಸ್ಥಳದಲ್ಲಿ ಈತನನ್ನು ಕಂಡಿರುದಾಗಿ ತಿಳಿದು ಬಂದಿದೆ. ಜ.14ರಂದು ಸಂಜೆ ಸುಮಾರು 4ಗಂಟೆಯ ವೇಳೆ ಮೃತದೇಹ ಸ್ಥಳೀಯರ ಗಮನಕ್ಕೆ ಬಂದಿದೆ. ಕೂಡಲೇ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ತಲುಪಿದ ಪೋಲೀಸರು ಮೃತದೇಹದ ಪಂಚೆನಾಮೆ ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆ ಶವಗಾರಕ್ಕೆ ತಲುಪಿಸಲಾಗಿದೆ. ಈತನಿಗೆ ಮದ್ಯಪಾನ ಮಾಡುವ ಚಟ ಇತ್ತೆಂದು ಸಂಬಂಧಿಕರು ತಿಳಿಸಿದ್ದಾರೆ. ಮಂಜೇಶ್ವರ ಪೋಲೀಸರು ಸಾಧಾರಣ ಸಾವು ಪ್ರಕರಣ ದಾಖಲಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಜ.15ರಂದು ನಡೆಯಲಿದ್ದು, ಅದರ ವರದಿ ಬಂದ ಬಳಿಕವೇ ಹೆಚ್ಚಿನ ಮಾಹಿತಿ ತಿಳಿಯಲು ಸಾಧ್ಯವೆಂದು ಪೋಲೀಸರು ತಿಳಿಸಿದ್ದಾರೆ. ಮಾಹಿತಿ ತಿಳೀದು ಘಟನೆ ಸ್ಥಳಕ್ಕೆ ಜನಪ್ರತಿನಿಧಿಗಳು, ವಿವಿಧ ರಾಜಕೀಯ ನೇತಾರರ ಸಹಿತ ಭಾರೀ ಸಂಖ್ಯೆಯಲ್ಲಿ ಜನರು ತಲುಪಿದ್ದರು. ಮೃತರ ತಾಯಿ ಕಲ್ಯಾಣಿ, ಸಹೋದರ ಚಂದ್ರಹಾಸ, ಸಹೋದರಿಯರಾದ ಮಂಜುಳ, ಚಂಚಲಾಕ್ಷಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *