ಮುಂಡಿತ್ತಡ್ಕ: ಮುಗು ಶ್ರೀಸುಬ್ರಾಯ ದೇವ ದೇವಸ್ಥಾನ ಕಿರು ಷಷ್ಠಿಮಹೋತ್ಸವ ಜ.15ರಂದು ಸಂಜೆ ಹಸಿರುವಾಣಿ ಸಮರ್ಪಣೆಯೊಂದಿಗೆ ಆರಂಭಗೊಂಡಿತು.
ದೇವಳದ ಮಹಾದ್ವಾರದ ಸಮೀಪದಿಂದ ಗ್ರಾಮಸ್ಥರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಸಿರುವಾಣಿ ಮೆರವಣಿಗೆ ವೈಭವದಿಂದ ಕ್ಷೇತ್ರಕ್ಕೆ ಸಾಗಿ ಬಂದಿತ್ತು. ಆಡಳಿತ, ಸೇವಾ ಸಮಿತಿ ವಿವಿಧ ಉಪ ಸಮಿತಿ ಪದಾಧಿಕಾರಿಗಳು ಮೆರವಣಿಗೆಗೆ ನೇತೃತ್ವವಹಿಸಿದ್ದರು. ಬಳಿಕ ರಾತ್ರಿ ಸಾಂಸ್ಕೃತಿಕ ನೃತ್ಯ ವೈಭವ ಪ್ರದರ್ಶನಗೊಂಡಿತು.