ಉಪ್ಪಳ: ಕೋಡಿಬೈಲು ಕರವೂರು ನಿವಾಸಿ ಕೂಲಿ ಕಾರ್ಮಿಕ ನಾರಾಯಣ [ನಾಣು] ಪೂಜಾರಿ [63] ಜ.14ರಂದು ಪೆರಿಯಾರಂ ಮೆಡಿಕಲ್ ಕಾಲೇಜು ಆಶ್ಪತ್ರೆಯಲ್ಲಿ ನಿಧನರಾದರು.
ಇವರನ್ನು ಒಂದು ವಾರದ ಹಿಂದೆ ಹೃದಯ ಸಂಬಂಧಿಸಿದ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರದರು.
ಇವರು ಕರವೂರು ಶ್ರೀ ಕೊರಗು ತನಿಯ ದೈವದ ಪಾತ್ರಿಯಾಗಿದ್ದರು. ಮೃತರು ಪತ್ನಿ ಸುಮತಿ, ಮಕ್ಕಳಾದ ಶಿವರಾಮ, ಶಶಿಕಲಾ, ಶಾಂಭವಿ, ಪುಷ್ಪ, ಸೊಸೆ ವಿಲಾಸಿನಿ, ಅಳಿಯಂದಿರಾದ ರವಿ, ಸತೀಶ, ಹರೀಶ, ಸಹೋದರ ವೆಂಕಪ್ಪ ಪೂಜಾರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.