ಪೆರ್ಲ: ಪುತ್ತಿಗೆ ಗ್ರಾಮ ಪಂಚಾಯತ್ ವಾರ್ಷಿಕ ಯೋಜನೆ ರಚನೆಯ ಅಂಗವಾಗಿ 2024-2025ನೇ ವಾರ್ಷಿಕ ಪದ್ಧತಿಯ ಅಭಿವೃದ್ಧಿ ಸೆಮಿನಾರ್ ಸೀತಾಂಗೋಳಿ ಐಸಿಡಿಎಸ್ ಸಭಾಂಗಣದಲ್ಲಿ ನಡೆಯಿತು.
ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಉದ್ಘಾಟಿಸಿದರು. ಗ್ರಾ.ಪಂ.ಉಪಾಧ್ಯಕ್ಷೆ ಜಯಂತಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ ವರದಿ ಮಂಡಿಸಿದರು.
ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಬ್ಲೋಕ್ ಪಂ.ಸದಸ್ಯ ಕೆ.ಪಿ.ಅನಿಲ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮಜೀದ್, ವಿನುತಾ ಮೊದಲಾದವರು ಮಾತನಾಡಿದರು.
ವಿವಿಧ ವಾರ್ಡ್ ಸದಸ್ಯರು ಉಪಸ್ಥಿತರಿದ್ದರು. ಪಂ.ಕಾರ್ಯದರ್ಶಿ ರಾಜೇಶ್ವರೀ ಸ್ವಾಗತಿಸಿ ಅಸಿಸ್ಟೆಂಟ್ ಸೆಕ್ರಟರಿ ನೌಷಾದಲಿ ವಂದಿಸಿದರು.