ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ ವಾರ್ಷಿಕ ಯೋಜನೆ ರಚನೆಯ ಅಂಗವಾಗಿ 2024-2025ನೇ ವಾರ್ಷಿಕ ಪದ್ಧತಿಯ ಅಭಿವೃದ್ಧಿ ಸೆಮಿನಾರ್ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶದ ಅಭಿವೃದ್ಧಿ, ಕೃಷಿ, ಶೈಕ್ಷಣಿಕ ಹಾಗೂ ಆರೋಗ್ಯ ರಂಗದ ಪುರೋಗತಿಗೆ ಅನುಕೂಲಕರವಾದ ರೂಪುರೇಷೆ ರಚಿಸುವ ಅಭಿವೃದ್ಧಿಯನ್ನು ಪಂಚಾಯತ್ ಕೈಗೊಂಡಿದ್ದು ಇದರ ಯಶಸ್ಸಿನಲ್ಲಿ ಪ್ರತಿ ಜನಪ್ರತಿನಿಧಿಗಳ ಪಾತ್ರ ಮಹತ್ತರವಾದುದೆಂದರು.
ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್, ಪಂಚಾಯತ್ ಯೋಜನಾ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಪಂ.ಕಾರ್ಯದರ್ಶಿ ಹಂಸಾ ಮೊದಲಾದವರು ಮಾತನಾಡಿದರು.
ವಿವಿಧ ವಾರ್ಡ್ ಸದಸ್ಯರಾದ ಮಹೇಶ್ ಭಟ್, ಶಶಿಧರ್, ರಾಮಚಂದ್ರ ಎಂ, ನರಸಿಂಹ ಪೂಜಾರಿ, ರೂಪವಾಣಿ ಆರ್.ಭಟ್, ರಾಧಾಕೃಷ್ಣ ನಾಯಕ್, ಕುಸುಮಾವತಿ, ಝರಿನಾ ಎಂ, ಉಷಾ, ಆಶಾಲತ, ಇಂದಿರಾ, ರಮ್ಲ ಮೊದಲಾದವರು ಉಪಸ್ಥಿತರಿದ್ದರು.