ಉಡುಪಿ: ಯಾರದ್ದೋ ಹೆಸರಿನಲ್ಲಿ ಮತದಾನ ಮಾಡಿದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚುವಲ್ಲಿ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ.
ಮತಗಟ್ಟೆಗೆ ಅಳವಡಿಸಲಾದ ಕ್ಯಾಮೆರಾದಿಂದ ವೆಬ್ ಕಾಸ್ಟಿಂಗ್ ಮೂಲಕ ಆ ವ್ಯಕ್ತಿಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ರಾಜೀವ ನಗರ ಸಂಯುಕ್ತ ಪ್ರೌಢಶಾಲೆಯಲ್ಲಿ 38, 39, 40, 41 ಒಟ್ಟು ಮತಗಟ್ಟೆಗಳಿವೆ. 40ನೇ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿದ್ದ ಕೃಷ್ಣ ನಾಯ್ಕ್ ಎಂಬವರು 38ನೇ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿದ್ದ ಕೃಷ್ಣನಾಯ್ಕ್ ಎಂಬವರ ಹೆಸರಿನಲ್ಲಿ ಮತದಾನ ಮಾಡಿರುವುದೇ ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ. ಅಲ್ಲದೆ, ಇವರಿಬ್ಬರ ತಂದೆ ಹೆಸರು (ವಾಸು ನಾಯ್ಕ್) ಕೂಡ ಒಂದೇ ಆಗಿದೆ.