ಉಪ್ಪಳ: ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹತ್ತಿದ್ದು, ಈ ವೇಳೆ ಹೊರಗಡೆಯಿದ್ದ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮಂಗಲ್ಪಾಡಿ ಪ್ರತಾಪನಗರ ನಿವಾಸಿ ಬ್ಯಾಂಕ್ ಉದ್ಯೋಗಿ ಶಿವಪ್ರಸಾದ್ ಎಂಬವರ ಮನೆ ಅಂಗಳದಲ್ಲಿರುವ ತೆಂಗಿನ ಮರಕ್ಕೆ ಗುರುವಾರ ರಾತ್ರಿ ಸುಮಾರು ೧೦ಗಂಟೆಗೆ ಸಿಡಿಲು ಬಡಿದಿದೆ. ಇದರಿಂದ ಬೆಂಕಿ ಹತ್ತಿಕೊಂಡಿದೆ. ಇದೇ ವೇಳೆ ಹೊರಗಡೆ ಸಿಟ್‌ಔಟ್‌ನಲ್ಲಿ ಕುಳುತುಕೊಂಡಿದ್ದ ಮನೆ ಮಂದಿ ಓಡಿ ಹೊಳಗಡೆ ಹೋಗಿದ್ದಾರೆ. ಇದರಿಂದ ಅಪಾಯ ತಪ್ಪಿದೆ. ಕೂಡಲೇ ಉಪ್ಪಳದಿಂದ ಅಗ್ನಿ ಶಾಮಕ ದಳ ತಲುಪಿದ್ದು, ಅಷ್ಟರಲ್ಲಿ ಜೋರಾಗಿ ಮಳೆ ಬಂದ ಕಾರಣ ಬೆಂಕಿ ನಂದಿದೆ. ಈ ಪರಿಸರದ ವಿದ್ಯುತ್ ಕಂಬಕ್ಕೂ ಹಾನಿಯಾಗಿದ್ದು, ಈ ಪರಿಸರ ಪ್ರದೇಶದಲ್ಲಿ ವಿದ್ಯುತ್ ಮೊಟಕುಗೊಂಡಿದೆ. ಸಿಡಿಲಿನ ಅಘಾತಕ್ಕೆ ಮನೆಯ ವಿದ್ಯುತ್ ಉಪಕರಣಗಳು ನಾಶಗೊಂಡಿದೆಯೇ ಎಂದು ವಿದ್ಯುತ್ ಬಂದ ಬಳಿಕವೇ ತಿಳಿಯಬಹುದಾಗಿದೆ. ಮಳೆಗೆ ನಿನ್ನೆ ರಾತ್ರಿ ಸುಮಾರು ೧೦ಗಂಟೆ ವೇಳೆ ಮಂಜೇಶ್ವರ ಬಡಾಜೆ ರಸ್ತೆಗೆ ಖಾಸಾಗಿ ವ್ಯಕ್ತಿಯ ಬೀಜದ ಮರವೊಂದು ರಸ್ತೆಗೆ ಮುರಿದು ಬಿದ್ದು ಸಂಚಾರ ಮೊಟಕುಗೊಂಡಿದೆ. ಬಳಿಕ ಉಪ್ಪಳ ಅಗ್ನಿಶಾಮಕ ದಳ ತಲುಪಿ ಮರವನ್ನು ಕಡಿದು ತೆರವುಗೊಳಿಸಿ ಸಂಚಾರಕ್ಕೆ ವ್ಯವಸ್ಥೆಮಾಡಿದ್ದಾರೆ.