
ಉಪ್ಪಳ: ಮೂಸೋಡಿ ಹಾರ್ಬರ್ ಸಮೀಪದ ಸಮುದ್ರದಲ್ಲಿ ಅಪರಿಚಿತ ಶವ ಪತ್ತೆಯಾದ ಘಟನೆ ನಡೆದಿದೆ. ಬುಧವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ ಬೆಸ್ತರ ಗಮನಕ್ಕೆ ಶವ ಕಂಡುಬಂದಿದೆ. ಕುಂಬಳೆ ಕೋಸ್ಟಲ್ ಪೋಲೀಸರ ನಿರ್ಧೇಶನದಂತೆ ಮೀನು ಗಾರರು ಮೃತದೇಹವನ್ನು ಹಾರ್ಬರ್ ದಡಕ್ಕೆ ತಲುಪಿಸಿದ್ದಾರೆ.

ಜೀರ್ವಾವಸ್ಥೆಯಲ್ಲಿ ಪತ್ತೆಯಾದ ಮೃತದೇಹ ಯುವಕನದ್ದು ಎಂದು ತಿಳಿದುಬಂದಿದೆ. ದೇಹದಲ್ಲಿ ಒಳಉಡುಪು ಮಾತ್ರವೇ ಕಂಡುಬಂದಿದೆ. ಕೋಸ್ಟಲ್ ಪೋಲೀಸರ ನೇತೄತ್ವದಲ್ಲಿ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಗುರುತು ಪತ್ತೆಗೆ ಯತ್ನಿಸುತ್ತಿದ್ದಾರೆ.




