ಮಗಳ ಭವಿಷ್ಯಕ್ಕಾಗಿ ತಂದೆಯ ಹೋರಾಟ; ತನ್ನ ಆಟೋದಲ್ಲಿ ಮಗಳನ್ನು ಮಲಗಿಸಿ ಆಟೋ ಓಡಿಸುವ ವ್ಯಕ್ತಿ

Share with

ಈ ವಿಡಿಯೋದಲ್ಲಿ ಆಟೋ ಚಾಲಕನೊಬ್ಬ ತನ್ನ ಪುಟ್ಟ ಮಗಳನ್ನು ಆಟೋದಲ್ಲಿ ಮಲಗಿಸಿರುವುದನ್ನು ಕಾಣಬಹುದು. ಈ ಆಟೋದಲ್ಲಿದ್ದ ಪ್ರಯಾಣಿಕರೊಬ್ಬ ‘ಆಟೋದಲ್ಲಿ ಮಗುವನ್ನು ಏಕೆ ಮಲಗಿಸಿದ್ದೀರಿ? ಯಾರಿದು ಮಗು? ಎಂದು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಆಟೋ ಚಾಲಕನು ಇವಳು ನನ್ನ ಮಗಳು. ಇತ್ತೀಚೆಗಷ್ಟೇ ನನ್ನ ಹೆಂಡತಿ ತೀರಿಕೊಂಡಳು. ಮಗಳನ್ನು ಮನೆಯಲ್ಲಿ ಒಬ್ಬಳೇ ಬಿಟ್ಟು ಆಟೋ ಓಡಿಸಲು ಬರಲು ನನಗೆ ಸಾಧ್ಯವಿಲ್ಲ. ನಾನು ಮಗುವನ್ನು ನೋಡಿಕೊಳ್ಳಬೇಕು. ಜೊತೆಗೆ ಕೆಲಸಕ್ಕೆ ಹೋಗದಿದ್ದರೆ ನಮ್ಮ ಜೀವನ ನಡೆಯುವುದು ಕಷ್ಟವಾಗುತ್ತದೆ. ನಾನು ಈಗ ಸಿಂಗಲ್ ಪೇರೆಂಟ್ ಆಗಿರುವ ಕಾರಣ, ಮಗಳನ್ನು ಆಟೋದಲ್ಲೇ ಮಲಗಿಸಿಕೊಂಡು ಕೆಲಸಕ್ಕೆ ಕರೆತರುತ್ತೇನೆ ಎಂದು ಹೇಳಿದ್ದಾನೆ. ಈ ಆಟೋ ಪ್ರಯಾಣಿಕನ ಕಥೆ ಕೇಳಿ ಮನದಲ್ಲೇ ನೊಂದುಕೊಂಡ ಪ್ರಯಾಣಿಕ, ಮಗು ಎಚ್ಚರಗೊಂಡಾಗ ಜ್ಯೂಸ್ ಕೊಡಿಸಿ ಎಂದು ಹಣ ನೀಡಿರುವುದನ್ನು ಕಾಣಬಹುದು.


ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದು ಕೊಂಡಿವೆ. ಒಬ್ಬ ಬಳಕೆದಾರ, ಅಪ್ಪ ಯಾವತ್ತಿದ್ದರೂ ಹೀರೋನೇ ಎಂದಿದ್ದಾರೆ. ಮತ್ತೊಬ್ಬರು, ಕಷ್ಟಪಟ್ಟು ದುಡಿಯುತ್ತಾ ಮಗಳನ್ನು ಏಕಾಂಗಿಯಾಗಿ ಸಾಕುವುದು ಅಷ್ಟು ಸುಲಭವಲ್ಲ. ಇವರೇ ನಿಜವಾದ ಹೀರೋಗಳು, ಈ ಕಥೆ ಹೃದಯಸ್ಪರ್ಶಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಅಪ್ಪನ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ ಎಂದು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *