ಸಿಗರೇಟ್ ವಿಚಾರವಾಗಿ ಬಾರ್ ನಲ್ಲಿ ಗಲಾಟೆ; ಚಾಕು ಇರಿತ..!

Share with

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಬಾರ್‌ನಲ್ಲಿ ಗಲಾಟೆ ನಡೆದು ಚಾಕು ಇರಿತ ಮಾಡಿದ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ಶಕ್ತಿನಗರದಲ್ಲಿ ನಡೆದಿದೆ.

ಸಿಗರೇಟ್ ವಿಚಾರವಾಗಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಓರ್ವನಿಗೆ ಚಾಕು ಇರಿತ ಮಾಡಲಾಗಿದ್ದು, ಗಲಾಟೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗಲಾಟೆ ವೇಳೆ ಏಕಾಏಕಿ ಚಾಕುವಿನಿಂದ ಮೂಗ್ತಿಹಳ್ಳಿ ಗ್ರಾಮದ ಅನಿಲ್‌ ಕುಮಾರ್ ಎಂಬಾತನಿಗೆ ಇರಿಯಲಾಗಿದೆ. ಬಾರ್ ಒಳಗಿಂದ ಚಾಕು ತಂದ ಆರೋಪಿಯು ಇರಿದು ಎಸ್ಕೆಪ್ ಆಗಿದ್ದರು. ಗಂಭೀರವಾಗಿ ಗಾಯಗೊಂಡ ಅನಿಲ್ ಗೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಚಾಕು ಇರಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *