ಯಕ್ಷಗಾನ ಕಲಿಕೆಗಾಗಿ ಉಡುಪಿಯಲ್ಲಿ ಬೀಡುಬಿಟ್ಟ ವಾರಣಾಸಿಯ ವಿದ್ಯಾರ್ಥಿಗಳ ತಂಡ

Share with

ಮರಾಠಿ ಸಮುದಾಯದವರಿಂದ ಹೋಳಿ ಕುಣಿತ ಪ್ರದರ್ಶನ

ಉಡುಪಿ: ಪ್ರಧಾನಿ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿಯ ವಿದ್ಯಾರ್ಥಿಗಳ ತಂಡವೊಂದು ಯಕ್ಷಗಾನ ಕಲಿಯಲೆಂದು ಉಡುಪಿಯಲ್ಲಿ ಬೀಡುಬಿಟ್ಟಿದೆ.
ವಾರಣಾಸಿ ಎನ್ಎಸ್ ಡಿಯ ರಂಗ ವಿದ್ಯಾರ್ಥಿಗಳು ಕಳೆದ 20 ದಿನಗಳಿಂದ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ. ಯಕ್ಷಗಾನದ ಜೊತೆಗೆ ಕರಾವಳಿಯ ಜನಪದವನ್ನು ಅರಿತುಕೊಳ್ಳುವ ಪ್ರಯತ್ನವಾಗಿ, ಇಂದು ಹೋಳಿ ಕುಣಿತ ಏರ್ಪಾಡಿಸಲಾಗಿತ್ತು. ಮಹಾರಾಷ್ಟ್ರದಿಂದ ವಲಸೆ ಬಂದು ಶತಮಾನಗಳು ಕಳೆದರೂ ಹೋಳಿಕುಣಿತ ಇಂದಿಗೂ ನಡೆಸುತ್ತಿರುವ ಮರಾಠಿ ಸಮುದಾಯದ ಈ ಪ್ರದರ್ಶನ ರಂಗ ವಿದ್ಯಾರ್ಥಿಗಳ ಮೆಚ್ಚುಗೆಗಳಿಸಿತು. ಪರಂಪರಾಗತವಾಗಿ ಬಂದಿರುವ ಹೋಳಿ ಕುಣಿತವನ್ನು ಪ್ರದರ್ಶಿಸಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿತ್ತು.


Share with

Leave a Reply

Your email address will not be published. Required fields are marked *