ಉಪ್ಪಳ: ಮಂಗಲ್ಪಾಡಿ ಪ್ರತಾಪನಗರ ದಿ.ಕಾಂತಪ್ಪ ಪೂಜಾರಿಯವರ ಪತ್ನಿ ಆರ್ಥಿಕ ವಾಗಿ ತುಂಬಾ ಬಡವರಾಗಿದ್ದು ತಾನು ದುಡಿದು ಅನಾರೋಗ್ಯದಿಂದಿರುವ ಎರಡು ಮಕ್ಕಳನ್ನು ಕಷ್ಟಪಟ್ಟು ಸಲಹುತ್ತಿದ್ದಾರೆ. ಇವರ ಕಷ್ಟಗಳನ್ನು ಅರಿತು ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ಪದಾಧಿಕಾರಿಗಳಾದ ಶೀನಪ್ಪ ಪೂಜಾರಿ ಅಲಾರ್ ದುರ್ಗಿಪಳ್ಳ ಐತ್ತಪ್ಪ ಪೂಜಾರಿ ಅರಿಯಾಳ, ಜಯಂತಿ ಪೈವಳಿಕೆ, ಅನಿಲ್ ಪ್ರತಾಪನಗರ,ಹರಿಣಾಕ್ಷಿ ಪ್ರತಾಪನಗರ ಇವರು ಮನೆಗೆ ಬೇಟಿ ನೀಡಿ ಸಹಾಯ ಧನ ಹಸ್ತಾಂತರಿಸಿ ಸಾಂತ್ವನವನ್ನು ಹೇಳಿದರು