ಚುನಾವಣಾ ಅಭ್ಯರ್ಥಿಯ ಮನೆ ತೋಟದಲ್ಲಿ ನಾಡ ಬಾಂಬ್ ಸ್ಪೋಟ..! ಸಾಕು ನಾಯಿ ಬಲಿ

Share with

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬ್ಬಾಜೆಯಲ್ಲಿ ಅಭ್ಯರ್ಥಿಯ ಮನೆಯ ಮುಂದೆ ನಾಡಬಾಂಬ್ ಸ್ಫೋಟಗೊಂಡು ಸಾಕುನಾಯಿ ಸಾವಿಗೀಡಾದ ಘಟನೆ ನಡೆದಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಬದಿಯಡ್ಕ ಪೊಲೀಸರು ಸ್ಫೋಟಗೊಳ್ಳದೆ ಉಳಿದ ಮೂರು ನಾಡಬಾಂಬ್‌ಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಪಂಚಾ ಯತ್ ಬದಿಯಡ್ಕ ಡಿವಿಶನ್‌ನ ಎಡರಂಗ ಅಭ್ಯರ್ಥಿಯಾದ ಕಾಡ್ರಬೆಳ್ಳಿಗೆಯ ಪ್ರಕಾಶರ ಮನೆ ಸಮೀಪದ ತೋಟದಲ್ಲಿ ಇ೦ದು ಬೆಳಿಗ್ಗೆ 7 ಗಂಟೆ ವೇಳೆ ಭಾರೀ ಶಬ್ದದೊಂದಿಗೆ ಸ್ಫೋಟ ನಡೆದಿದೆ. ಶಬ್ದ ಕೇಳಿ ಜನರು ಅಲ್ಲಿಗೆ ತಲುಪಿದಾಗ ಪ್ರಕಾಶರ ಸಾಕುನಾಯಿ ಸಾವಿಗೀಡಾಗಿರುವುದು ಕಂಡುಬಂದಿದೆ. ಸಮೀಪದಲ್ಲಿ ಇತರ ಮೂರು ನಾಡ ಬಾಂಬ್‌ಗಳನ್ನು ಪತ್ತೆಹಚ್ಚಲಾಗಿದೆ.

ಈ ಪ್ರದೇಶದಲ್ಲಿ ಕಾಡುಹಂದಿ ಉಪಟಳ ತೀವ್ರಗೊಂಡಿದೆ. ಹಂದಿಗಳನ್ನು ಕೊಲ್ಲಲು ಇರಿಸಿದ ಸ್ಫೋಟಕ ವಸ್ತು ಸಿಡಿದಿರುವುದಾಗಿ ಸಂಶಯಿಸಲಾಗುತ್ತಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.


Share with

Leave a Reply

Your email address will not be published. Required fields are marked *