ಜೀವವನ್ನೇ ತೆಗೆದ ಕನಸು; ಯೂಟ್ಯೂಬ್ನಲ್ಲಿ ಮಂತ್ರ ಕಲಿತು 12 ವರ್ಷದ ಬಾಲಕಿಯ ಜೀವ ಬಲಿ ನೀಡಿದ ದಂಪತಿ

Share with

ಉತ್ತರಪ್ರದೇಶದ ಡಿಯೋರಿಯಾದಲ್ಲಿ 12 ವರ್ಷದ ಅಮಾಯಕ ಬಾಲಕಿಯ ಕೊಲೆ ನಡೆದಿರುವುದು ಸಂಚಲನ ಮೂಡಿಸಿದೆ. ಈ ಹುಡುಗಿಯನ್ನು ಮಾಟ ಮತ್ತು ಕುರುಡು ನಂಬಿಕೆಯ ಪ್ರಭಾವದಿಂದ ಆಕೆಯ ತಂದೆಯ ತಂಗಿ- ಭಾವ ಕೊಲೆ ಮಾಡಿದ್ದಾರೆ. ದೇವಿಗೆ ಬಲಿ ಕೊಡಲು ದಂಪತಿ ಈ ಕೃತ್ಯ ಎಸಗಿದ್ದಾರೆ. ಡಿಯೋರಿಯಾದ ಭಟ್ನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ನವೆಂಬರ್ 26ರ ರಾತ್ರಿ ನಡೆದ ಈ ಆಘಾತಕಾರಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಹಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ನವೆಂಬರ್ 27ರ ಬೆಳಿಗ್ಗೆ ಬಾಲಕಿಯ ಶವ ಪತ್ತೆಯಾಗಿತ್ತು. ಈ ಬಾಲಕಿಯನ್ನು ಭಟ್ನಿಯ ಭರ್ಹೆ ಚೌರಾಹ ನಿವಾಸಿ ಅವಧೇಶ್ ಯಾದವ್ ಅವರ 12 ವರ್ಷದ ಮಗಳು ಎಂದು ಗುರುತಿಸಲಾಗಿದೆ. ಅವಧೇಶ್ ಯಾದವ್ ತಮ್ಮ ಸಂಬಂಧಿಕರ ಮದುವೆಗೆಂದು ಇಲ್ಲಿಗೆ ಬಂದಿದ್ದರು. ಉತ್ತರಾಖಂಡದಿಂದ ಬಂದಿದ್ದ ಆರೋಪಿ ಶೇಷನಾಥ ಯಾದವ್ ಮತ್ತು ಆತನ ಪತ್ನಿ ಸಬಿತಾ ಕೂಡ ಇದೇ ಕಾರ್ಯಕ್ರಮಕ್ಕೆ ಬಂದಿದ್ದರು. ಡಿಯೋರಿಯಾ ಎಸ್ಪಿ ಪ್ರಕಾರ, ಆ ಸಮಯದಲ್ಲಿ ಈ ಪ್ರಕರಣವನ್ನು ಅಸಾಮಾನ್ಯ ಸಾವು ಎಂದು ದಾಖಲಿಸಲಾಗಿತ್ತು. ಆದರೆ ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದಾಗ, ಈ ಘಟನೆಯ ಪದರಗಳು ಬಿಚ್ಚಿಕೊಳ್ಳಲಾರಂಭಿಸಿದವು.

ಕೊನೆಗೆ ಆರೋಪಿ ದಂಪತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ನವರಾತ್ರಿ ವೇಳೆ ಆರೋಪಿ ಶೇಷನಾಥನ ಪತ್ನಿ ಸವಿತಾ ಅವರ ಕನಸಿನಲ್ಲಿ ದೇವಿ ಬಂದಿರುವುದು ಪತ್ತೆಯಾಗಿದೆ. ಸವಿತಾ ತನ್ನ ಮಗನಿಗೆ 22 ವರ್ಷ ವಯಸ್ಸಾಗಿದ್ದು, ಮಾನಸಿಕವಾಗಿ ಅಸ್ವಸ್ಥನಾಗಿದ್ದ. ಕನಸಿನಲ್ಲಿ ದೇವಿಯು ಕನ್ಯೆಯ ಹುಡುಗಿಯನ್ನು ಬಲಿಕೊಟ್ಟರೆ ಆಕೆಯ ಮಗ ಗುಣಮುಖನಾಗುತ್ತಾನೆ ಎಂದು ಆಕೆಗೆ ಆದೇಶಿಸಿದ್ದಳು. ಇದಾದ ನಂತರ ಆರೋಪಿ ಶೇಷನಾಥ್ ಯೂಟ್ಯೂಬ್ನಲ್ಲಿ ದೇವಿಗೆ ಬಲಿ ಕೊಡುವ ಮಂತ್ರ ಕಲಿತು ಈ ಮದುವೆಗೆ ಭಟ್ನಿಗೆ ಬಂದಾಗ ಇಲ್ಲಿದ್ದ ಹುಡುಗಿಯನ್ನು ನೋಡಿ ಬಲಿ ಕೊಡಲು ಪ್ಲಾನ್ ಮಾಡಿದ್ದ.

ಮನೆಯವರೆಲ್ಲಾ ಮದುವೆ ಸಮಾರಂಭದಲ್ಲಿ ನಿರತರಾಗಿದ್ದಾಗ, ಈ ವೇಳೆ ಆರೋಪಿಗಳು ಬಾಲಕಿಗೆ ಆಮಿಷ ಒಡ್ಡಿ ಆಕೆಯನ್ನು ತಡೆದು, ಅವಕಾಶ ಸಿಕ್ಕಾಗ ಬಲಿ ಕೊಟ್ಟಿದ್ದಾರೆ. ಈ ಘಟನೆಯ ನಂತರ ಆರೋಪಿಗಳು ಬಾಲಕಿಯ ಶವವನ್ನು ಶಾಲಿನಲ್ಲಿ ಸುತ್ತಿ ಮನೆಯಿಂದ ಸ್ವಲ್ಪ ದೂರ ಎಸೆದಿದ್ದಾರೆ. ಮರುದಿನ ಬಾಲಕಿಯ ಶವ ಪತ್ತೆಯಾದಾಗ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು.


Share with

Leave a Reply

Your email address will not be published. Required fields are marked *