ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ

Share with

ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಮದಲಾಪುರ ಗ್ರಾಮಕ್ಕೆ ಮಂಗಳವಾರ ರಾತ್ರಿಯಿಂದ ಗ್ರಾಮದಲ್ಲಿ ಕಾಣಿಸಿಕೊಂಡ  ಕಾಡಾನೆ .

ಬುಧವಾರ ಬೆಳಿಗ್ಗೆ  ಒಂಟಿ ಸಲಗ ಗ್ರಾಮಸ್ಥರನ್ನು ಭಯಭೀತಗೊಳಿಸಿದೆ. ಮನೆಯ ಮುಂದೆ ನಿಂತಿದ್ದ ಬೈಕನ್ನು ತಳ್ಳಿ ದಾಳಿ ಮಾಡಿದ್ದು. ಜನವಾಸಿಸುವ ಗ್ರಾಮದೊಳಗೆ ಸ್ವಲ್ಪ ಹೊತ್ತು ಓಡಾಡುತ್ತಿದ್ದ  ಕಾಡಾನೆ. ಜನರ ಕಿರುಚಾಟ ಹೆಚ್ಚಾದಂತೆ, ಗ್ರಾಮವು ಕಾಫಿ ತೋಟಕ್ಕೆ ಹೋಯಿತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆನೆಯನ್ನು ಕಾಡಿಗೆ ಹೋಗುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಆಹಾರಕ್ಕಾಗಿ ಅಲೆದಾಡುತ್ತಿರುವ ಕಾಡು ಆನೆಗಳು ಕಾಫಿ ತೋಟಗಳಿಗೆ ನುಗ್ಗಿ ಈ ಪ್ರದೇಶದ ಬೆಳೆಗಳನ್ನು ತಿಂದು ಹಾಕುತ್ತಿವೆ. ಜನರು  ಜಮೀನು ತೋಟಗಳ ಕಡೆಗೆ ಹೋಗಲು ಹೆದರುತ್ತಿದ್ದಾರೆ. ಕಾಡು ಆನೆಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಒತ್ತಾಯಿಸಿದ್ದಾರೆ.


Share with

Tags:

Leave a Reply

Your email address will not be published. Required fields are marked *