
ಉಪ್ಪಳ: ನಿಂತಿದ್ದ ಬಸ್ಗೆ ಲಾರಿ ಡಿಕ್ಕಿಹೊಡೆದು ಹಲವರು ಗಾಯಗೊಂಡ ಘಟನೆ ನಡೆದಿದೆ ಉಪ್ಪಳ ಗೇಟ್ ಬಳಿಯಲ್ಲಿ ಸೋಮವಾರ ಬೆಳಿಗ್ಗೆ ಸುಮಾರು ೮.೪೫ರ ವೇಳೆ ನಡೇದಿದೆ. ತಲಪಾಡಿಯಿಂದ ಕಾಸರಗೋಡಿಗೆ ತೆರಳುತ್ತಿದ ಖಾಸಾಗಿ ಬಸ್ ಉಪ್ಪಳ ಗೇಟ್ ಬಳಿಯಲ್ಲಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ್ದ ವೇಳೆ ಎದುರು ಭಾಗದಿಂದ ಲಾರಿಯೊಂದು ಇನ್ನೊಂದು ವಾಹವನ್ನು ಓವರ್ಟೇಕ್ ಮಾಡಿ ಸಂಚರಿಸುತಿದ್ದAತೆ ಬಸ್ಗೆ ಡಿಕ್ಕಿಹೊಡೆದಿದೆ. ಇದರಿಂದ ಬಸ್ನೊಳಗೆ ಸಿಲಿಕಿ ಗಾಯಗೊಂಡ ಚಾಲಕ ಉಪ್ಪಳದ ಅಶ್ರಫ್ ಎಂಬವರನ್ನು ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಸ್ನಲ್ಲಿ ಇಬ್ಬರು ಪ್ರಯಣಿಕರು ಹಾಗೂ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಮಂಜೇಶ್ವರ ಪೋಲೀಸರು ಹಾಗೂ ಉಪ್ಪಳ ಅಗ್ನಿಶಾಮಕ ದಳ ತಲುಪಿ ಹಾನಿಗೀಡಾದ ಬಸ್ ಹಾಗೂ ಲಾರಿಯನ್ನು ಬದಿಗೆ ಸರಿಸಿ ಹೆದ್ದಾರಿಯನ್ನು ಇತರ ವಾಹನಗಳ ಸಂಚಾರಕ್ಕೆ ಸುಗಮಗೊಳಿಸಿದ್ದಾರೆ.





