ಮನುಷ್ಯರನ್ನು ಕೊಂದು, ರಕ್ತ ಕುಡಿದು, ಮೆದುಳು ತಿನ್ನುತ್ತಿದ್ದ ನರಭಕ್ಷಕ ರಾಜನಿಗೆ ಜೀವಾವಧಿ ಶಿಕ್ಷೆ

Share with

ಲಕ್ನೋ, ಮೇ 25: ಮನುಷ್ಯರನ್ನು ಕೊಂದು ರಕ್ತ ಕುಡಿದು, ಮೆದುಳು ತಿನ್ನುತ್ತಿದ್ದ ಹಂತಕ ರಾಮ್ ನಿರಂಜನ್ ಕೋಲ್ ಅಲಿಯಾಸ್ ರಾಜಾ ಕೋಲಂದರ್ಗೆ ಲಕ್ನೋ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 2000ರಲ್ಲಿ ನಡೆದ ಜೋಡಿ ಕೊಲೆ(Murder)  ಪ್ರಕರಣದಲ್ಲಿ ಲಕ್ನೋ ನ್ಯಾಯಾಲಯವ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡವನ್ನು ವಿಧಿಸಿದೆ.

2000 ರಲ್ಲಿ ನಡೆದ ಪತ್ರಕರ್ತ ಮನೋಜ್ ಸಿಂಗ್ ಮತ್ತು ಅವರ ಚಾಲಕ ರವಿ ಶ್ರೀವಾಸ್ತವ್ ಅವರ ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ದೋಷಿ ಎಂದು ಘೋಷಿಸಿದ್ದಾರೆ, ಆದರೆ ಆರೋಪಿ ಮುಖದಲ್ಲಿ ಯಾವುದೇ ಪಶ್ಚಾತಾಪ ಕಾಣಿಸಲಿಲ್ಲ ಬದಲಾಗಿ, ಕುಹಕ ನಗು ಇತ್ತು. ರಾಜ ಕೊಲಂದರ್ 14 ಜನರನ್ನು ಕೊಂದ ಆರೋಪ ಹೊತ್ತಿದ್ದಾನೆ. ಲಕ್ನೋದ ಸಿಜೆಎಂ ನ್ಯಾಯಾಲಯ ಶುಕ್ರವಾರ ರಾಜಾ ಕೊಲಂದರ್ ಮತ್ತು ಅವರ ಸೋದರ ಮಾವ ವಕ್ಷರಾಜ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಇಬ್ಬರನ್ನೂ ಲಕ್ನೋದಿಂದ ಟ್ಯಾಕ್ಸಿಯಲ್ಲಿ ರಾಯ್ ಬರೇಲಿಗೆ ಕರೆದೊಯ್ದು ಕಾಡಿನಲ್ಲಿ ಕೊಲೆ ಮಾಡಲಾಗಿತ್ತು. ಕೆಲವು ದಿನಗಳ ನಂತರ ಬರ್ಗಢ ಕಾಡಿನಲ್ಲಿ ಅವರ ಬೆತ್ತಲೆ ಶವಗಳು ಪತ್ತೆಯಾಗಿದ್ದವು. ರಾಜಾ ಕುಲಂದರ್ ಪ್ರಯಾಗರಾಜ್‌ನ ನೈನಿ ಪ್ರದೇಶದ ನಿವಾಸಿ. 2000 ಇಸವಿಯಲ್ಲಿ ಪತ್ರಕರ್ತ ಧೀರೇಂದ್ರ ಸಿಂಗ್ ಅವರ ಹತ್ಯೆಯ ತನಿಖೆ ನಡೆಸಿದಾಗ, ಅವರ ಮನೆಯಿಂದ ಹಲವಾರು ಅಸ್ಥಿಪಂಜರಗಳು ಮತ್ತು ಮಾನವ ತಲೆಬುರುಡೆಗಳು ಪತ್ತೆಯಾಗಿದ್ದವು.


Share with

Leave a Reply

Your email address will not be published. Required fields are marked *