ಬಹ್ಮಚ್: ಚಿರತೆ ಹಿಡಿಯಲು ಅರಣ್ಯ ಅಧಿಕಾರಿಗಳು ಇಟ್ಟ ಬೋನಿನಲ್ಲಿ ವ್ಯಕ್ತಿಯೋರ್ವ ಸಿಕ್ಕಿ ಬಿದ್ದಿರುವ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದ ಬಹ್ಮಚ್ ನಲ್ಲಿ ಗುರುವಾರ (ನ.27) ರಾತ್ರಿ ನಡೆದಿದ್ದು ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಬಹ್ಮಚ್ ನಲ್ಲಿ ಚಿರತೆಗಳ ಕಾಟ ಹೆಚ್ಚಾಗಿದ್ದು ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನ್ ಇರಿಸಿದ್ದಾರೆ ಆದರೆ ಗುರುವಾರ ರಾತ್ರಿ ಕುಡಿದ ಮತ್ತಿನಲ್ಲಿ ಪ್ರದೀಪ್ ಎಂಬ ವ್ಯಕ್ತಿ ಚಿರತೆ ಸೆರೆಗೆ ಇಟ್ಟ ಬೋನಿನ ಬಳಿ ತೆರಳಿದ್ದಾನೆ ಜೊತೆಗೆ ಇದರ ಒಳಗೆ ಪ್ರವೇಶಿಸಿದ್ದಾನೆ ಈ ವೇಳೆ ಬಾಗಿಲು ಬಿದ್ದು ವ್ಯಕ್ತಿ ಒಳಗೆ ಲಾಕ್ ಆಗಿದ್ದಾನೆ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಗೆ ಹೊರ ಬರಲು ಸಾಧ್ಯವಾಗಲಿಲ್ಲ.
ಶುಕ್ರವಾರ ಬೆಳಿಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಇಟ್ಟ ಬೋನಿನ ಪರಿಶೀಲನೆಗೆ ಬಂದಾಗ ಅಚ್ಚರಿಯ ಸಂಗತಿ ಕಾದಿತ್ತು ಅಂದರೆ ಚಿರತೆಗೆ ಇಟ್ಟ ಬೋನಿನಲ್ಲಿ ಚಿರತೆ ಬದಲು ವ್ಯಕ್ತಿ ಸಿಕ್ಕಿಬಿದ್ದಿರುವುದು ಕಂಡು ಇಲಾಖೆ ಅಧಿಕಾರಿಗಳೇ ಶಾಕ್ ಗೆ ಒಳಗಾಗಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಎರಡು ದಿನಗಳ ಹಿಂದೆ ಇದೇ ಪ್ರದೇಶದ ಶಾಂತಿ ದೇವಿ ಎಂಬ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿತ್ತು.




