ನಂದಿನಿ ಹಾಲು ಇನ್ಮುಂದೆ ಹೊಸ ರೂಪದಲ್ಲಿ ಗ್ರಾಹಕರ ಕೈಸೇರಲಿದೆ. ಪರಿಸರಕ್ಕೆ ಹಾನಿಕಾರಕವಾದ ಪಾಲಿಥಿನ್ ಪ್ಯಾಕೆಟ್‌ಗಳ ಬದಲಿಗೆ, ಬಯೋಡಿಗ್ರೇಡೆಬಲ್ ಪರಿಸರ ಸ್ನೇಹಿ ಪ್ಯಾಕೆಟ್‌ಗಳಲ್ಲಿ ನಂದಿನಿ ಹಾಲು ಬಿಡುಗಡೆಯಾಗಲಿದೆ.

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮತ್ತು ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಈ ಐತಿಹಾಸಿಕ ಹೆಜ್ಜೆ ಇಟ್ಟಿದ್ದು, ದೇಶದ ಹಾಲು ಉದ್ಯಮದಲ್ಲಿ ಇದು ಮೊದಲ ಪ್ರಯತ್ನವಾಗಿದೆ. ಈ ಮೂಲಕ ನಂದಿನಿ ಹಾಲು ದೇಶಾದ್ಯಂತ ಪರಿಸರ ಸ್ನೇಹಿ ಬ್ರಾಂಡ್ ಆಗಿ ಗುರುತಿಸಿಕೊಳ್ಳಲಿದೆ.




