ಸೊಳ್ಳೆ ನಿವಾರಕ ದ್ರಾವಣ ಸೇವಿಸಿ ಒಂದೂವರೆ ವರ್ಷದ ಮಗು ಸಾವು!

Share with

ಕಾಸರಗೋಡು: ಸೊಳ್ಳೆ ನಿವಾರಕ ದ್ರಾವಣ ಸೇವಿಸಿದ ಪರಿಣಾಮವಾಗಿ ಹೆಣ್ಣು ಮಗುವೊಂದು ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಕಾಞಂಗಾಡ್ ಕಲ್ಲೂರಾವಿ ನಿವಾಸಿ ರಂಶೀದ್–ಅನ್ಶಿಫಾ ದಂಪತಿಯ ಪುತ್ರಿಯಾದ ಜೆಸಾ(1.5) ಮೃತಪಟ್ಟ ಮಗುವಾಗಿದೆ. ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಆಟವಾಡುತ್ತಿದ್ದಾಗ ಸೊಳ್ಳೆ ನಿವಾರಕ ದ್ರಾವಣದ ಬಾಟಲಿ ಆಕಸ್ಮಿಕವಾಗಿ ಬಾಯಿಯಲ್ಲಿ ಇಟ್ಟುಕೊಂಡಿದ್ದು ಅದರದಲ್ಲಿದ್ದ ರಾಸಾಯನಿಕ ದ್ರಾವಣ ದೇಹ ಸೇರಿದರ ಪರಿಣಾಮವಾಗಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಗು ಮಂಗಳವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *