ಖಾಸಗಿ ಬಸ್ ಅಡಿಗೆ ಬಿದ್ದು ಪಾದಚಾರಿ ಸಾವು

Share with

ಮಂಗಳೂರು: ಪಾದಚಾರಿಯೊಬ್ಬರು ಖಾಸಗಿ ಬಸ್ ಅಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಗರದ ಸ್ಟೇಟ್‌ ಬ್ಯಾಂಕ್‌ ಬಳಿಯ ರಾವ್ ಆ್ಯಂಡ್ ರಾವ್ ಸರ್ಕಲ್‌ನಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಕೊಣಾಜೆಯ ಹೂ ಹಾಕುವ ಕಲ್ಲು ಎಂಬಲ್ಲಿಗೆ ತೆರಳುತ್ತಿದ್ದ ಖಾಸಗಿ ಬಸ್ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ತಿರುವು ಪಡೆಯುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದು ಆಗ ನೇರವಾಗಿ ಬಂದ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಅವರು ಮುಂದಿನ ಚಕ್ರದಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕೊಣಾಜೆಯ ಹೂ ಹಾಕುವ ಕಲ್ಲು ಎಂಬಲ್ಲಿಗೆ ತೆರಳುತ್ತಿದ್ದ ಖಾಸಗಿ ಬಸ್.

ವ್ಯಕ್ತಿಯ ತಲೆಯು ಛಿದ್ರಗೊಂಡಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಖವೂ ಛಿದ್ರಗೊಂಡ ಪರಿಣಾಮ ಅವರ ಮುಖ ಪರಿಚಯವೂ ಸಾಧ್ಯವಾಗಿಲ್ಲ. ಪಾಂಡೇಶ್ವರ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿ 40-42 ವಯಸ್ಸಿನವರು ಎನ್ನಲಾಗುತ್ತಿದ್ದು ಅಪರಿಚಿತನ ಪತ್ತೆಗಾಗಿ ಸಂಶಯ ಇದ್ದವರು ಪಾಂಡೇಶ್ವರ ಠಾಣೆಗೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ. ಶವವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇಡಲಾಗಿದೆ.


Share with

Leave a Reply

Your email address will not be published. Required fields are marked *