ಹೈವೇ ನಡುವಲ್ಲೇ ಸ್ಟೂಲ್ ಇಟ್ಟು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ವ್ಯಕ್ತಿ

Share with

ಮಂಗಳೂರು: ಮಂಗಳೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಪ್ರತೀ ದಿನ ರೋಡ್ ಬಿಟ್ಟು ಪದೇ ಪದೇ ಹೈವೇ ಮುಖಾಂತರ ಹೋಗುತ್ತಿತ್ತು. ಸಾಕಷ್ಟು ಬಾರೀ ಸರ್ವಿಸ್ ರೋಡ್ ನಲ್ಲೇ ಸಂಚರಿಸಿ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಎಂದು ಹಸೈನಾರ್ ಮನವಿ ಮಾಡಿದ್ದರು.

ಸ್ಟೂಲ್ ಇಟ್ಟು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ವ್ಯಕ್ತಿ.

ಆದರೆ ಅವರ ಮನವಿಗೆ ಕ್ಯಾರೇ ಎನ್ನದೆ ಸರ್ವಿಸ್ ರೋಡ್ ಬಿಟ್ಟು ಪದೇ ಪದೇ ಹೈವೇ ಮುಖಾಂತರ ಹೋಗುತ್ತಿದ್ದ ಬಸ್ಸನ್ನು ಹಸೈನಾರ್ ಅವರು ಸಿನಿಮೀಯ ರೀತಿಯಲ್ಲಿ ಬಸ್ ನ ಹೈವೇಯಿಂದಲೇ ವಾಪಸ್ ಕಳಿಸಿದ್ದಾರೆ.

ಸ್ಥಳೀಯ ಉದ್ಯಮಿಯಾಗಿರುವ ಹಸೈನಾರ್ ಅವರು ಹೈವೇ ನಡುವಲ್ಲೇ ಸ್ಟೂಲ್ ಇಟ್ಟು ಬಸ್ ನ ಹಿಂದಿರುಗಿಸಿದ ಬಳಿಕ ಬಸ್‌ ಚಾಲಕ ಅರ್ಧ ಕಿಲೋಮೀಟರ್ ರಿವರ್ಸ್ ಹೋಗಿ ಬಳಿಕ ಸರ್ವಿಸ್ ರೋಡ್ ನಲ್ಲೇ ಸಂಚರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.


Share with

Leave a Reply

Your email address will not be published. Required fields are marked *