ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿಯನ್ನು ಸೆ. 19ರಂದು ಆಚರಿಸಲಾಗುತ್ತಿದ್ದು, ಸರಕಾರಿ ರಜೆಯನ್ನು ಸೆ.18 ರಂದು ಘೋಷಿಸಲಾಗಿದೆ.
ಇದನ್ನು ಬದಲಾಯಿಸಿ ಸೆ. 19 ರಂದು ಮಂಗಳವಾರದಂದೇ ರಜೆ ನೀಡುವಂತೆ ಪ್ರತಾಪಸಿಂಹ ನಾಯಕ್ ಅವರು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ದ.ಕ.ಜಿಲ್ಲಾಧಿಕಾರಿಯವರಿಗೆ ಸೆ.11ರಂದು ಮನವಿ ಸಲ್ಲಿಸಿದ್ದಾರೆ. ಅದೇ ರೀತಿ ಅವರು ದ.ಕ.ಜಿಲ್ಲಾಧಿಕಾರಿಯವರಿಗೂ ಮನವಿ ಪತ್ರವನ್ನು ನೀಡಿದ್ದಾರೆ.