ಮಂಜೇಶ್ವರ: ಕುಂಜತ್ತೂರು ಸಣ್ಣಡ್ಕ ನಿವಾಸಿ [ದಿ] ಅಬ್ದುಲ್ಲ ಎಂಬವರ ಪುತ್ರ ಕತ್ತರ್‌ನಲ್ಲಿ ಉದ್ಯೋಗಿಯಲ್ಲಿದ್ದ ಅಬ್ದುಲ್ ರಹಿಮಾನ್ ಅಶ್ರಫ್ [೪೨] ಹೃದಯಘಾತದಿಂದ ನಿಧನ ಹೊಂದಿರುವುದಾಗಿ ಬುಧವಾರ ರಾತ್ರಿ ಮನೆಯವರಿಗೆ ಮಾಹಿತಿ ತಿಳಿದುಬಂದಿದೆ. ಕಳೆದ ಎರಡೂವರೆ ವರ್ಷಗಳಿಂದ ಕತ್ತ್ರ್‌ನಲ್ಲಿ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೆಕ್ಷನ್‌ನಲ್ಲಿ ಉದ್ಯೋಗಿಯಾಗಿದ್ದರು. ಆರು ತಿಂಗಳ ಹಿಂದೆಯಷ್ಟೆ ಊರಿನಿಂದ ಮರಳಿದ್ದರು. ಬೆಳಿಗ್ಗೆಯಿಂದಲೇ ದುಬೈಯಲ್ಲಿರುವ ಸಹೋದರ ಪೋನ್ ಕರೆ ಮಾಡಿದರೂ ತೆಗೆಯದ ಕಾರಣ ಕತ್ತರ್‌ನಲ್ಲಿರುವ ಸಂಬಂಧಿಕರು, ಸ್ನೇಹಿತರಿಗೆ ಮಾಹಿತಿ ತಿಳಿಸಿದ್ದಾರೆ. ಕೊಠಡಿಗೆ ಹೋಗಿ ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಸಾವಿಗೆ ಹೃದಯಘಾತ ಕಾರಣವೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತದೇಹದ ಅಂತ್ಯಸಂಸ್ಕಾರ ಕತ್ತರ್‌ನಲ್ಲಿ ನಡೆಯಿತು. ಸಂಬಂಧಿಕರು,ಸ್ನೇಹಿತರು ಭಾಗವಹಿಸಿದರು. ಮೃತರು ತಾಯಿ ಕದೀಜಮ್ಮ, ಪತ್ನಿ ನೌಸೀನ, ಮಕ್ಕಳಾದ ಸಹನ, ಮೈಸ, ಸಹೋದರ, ಸಹೋದರಿಯರಾದ ಹನೀಫ್ [ದುಬೈ], ಆಶಿಫ್, ಆಯಿಷ, ಜೌರ, ಜೀನತ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.