ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Share with

ಸಿಡ್ನಿ: ಗಾಳಿಯಲ್ಲಿ ಹರಡಿರುವ ವಾಸನೆಯನ್ನು ಗುರುತಿಸಿ ಅದರ ಮೂಲವನ್ನು ಪತ್ತೆ ಹಚ್ಚುವಲ್ಲಿ ನಾಯಿ ಮತ್ತು ಇಲಿಯನ್ನೂ ಮೀರಿಸುವ ವಸ್ತುವೊಂದು ಸೃಷ್ಟಿಯಾದರೆ ಅದರಿಂದಾಗುವ ಅನುಕೂಲಗಳು ಬಹಳಷ್ಟು ಸಮಸ್ಯೆಗಳನ್ನು ನಿವಾರಿಸಬಲ್ಲದು. ಇದೀಗ ಇಂತಹ ಎಲೆಕ್ಟ್ರಾನಿಕ್‌ ಮೂಗೊಂದು ಸೃಷ್ಟಿಯಾಗಿದ್ದು, ವಾಸನೆ ಗುರುತಿಸುವಿಕೆ ಪರೀಕ್ಷೆಯಲ್ಲಿ ಇದು ಇಲಿಯನ್ನೇ ಸೋಲಿಸಿದೆ.

ಪಶ್ಚಿಮ ಸಿಡ್ನಿ ವಿವಿಯ ವಿಜ್ಞಾನಿಗಳು ಈ ರೊಬೋಟ್‌ ಅಭಿವೃದ್ಧಿ ಪಡಿಸಿದ್ದು, ವಾಸನೆಯನ್ನು ಪತ್ತೆ ಹಚ್ಚುವುದು ಪ್ರಾಣಿಗಳ ಉಳಿವಿಗೆ ಕಾರಣವಾಗಿದೆ. ಹಲವು ಸಮಸ್ಯೆಗಳಲ್ಲಿ ಪ್ರಾಣಿಗಳನ್ನು ಬಳಸಿ ಮನುಷ್ಯ ಪರಿಹಾರ ಕಂಡುಕೊಳ್ಳುತ್ತಿದ್ದಾನೆ. ಪ್ರಾಣಿಗಳಿಗಿಂತಲೂ ವೇಗವಾಗಿ ಮತ್ತು ಖರಾರುವಕ್ಕಾಗಿ ಗುರುತಿಸುವ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದೇವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಬಹಳಷ್ಟು ಸಮಯದಲ್ಲಿ ಪ್ರಾಣಿಗಳಿಗೂ ಗುರುತಿಸಲಾದಗ ವಾಸನೆಯ ಮಾರ್ಗವನ್ನು ಈ ಯಂತ್ರ ಪತ್ತೆ ಮಾಡುತ್ತದೆ. ಇದರಿಂದಾಗಿ ದಟ್ಟ ಅರಣ್ಯದಲ್ಲಿ ಕಾಡ್ಗಿಚ್ಚು ಉಂಟಾದರೆ, ಭೂಕುಸಿತದ ಸಮಯದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು, ಕಳ್ಳರ ಮಾರ್ಗವನ್ನು ಕಂಡುಹಿಡಿಯಲು ಇದು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *