ಕೊಳಕು ನೀರಿನಲ್ಲಿ ಮಟ್ಕಾ ಸೋಡಾ ಮಾರಾಟ; ಅಂಗಡಿ ಸೀಝ್

Share with

ವ್ಯಕ್ತಿಯೊಬ್ಬ ತನ್ನ ಕೊಳಕು ಕೈಗಳಿಂದ ಕಲುಷಿತ ನೀರಿನಲ್ಲಿ ಮಡಕೆಗಳನ್ನು ತೊಳೆದು ಅದರಲ್ಲಿಯೇ ಸೋಡ ಹಾಕಿ ಗ್ರಾಹಕರಿಗೆ ನೀಡಿದ್ದಾರೆ.

ಮಂಗಳೂರು: ಮಂಗಳೂರಿನ ಪ್ರಸಿದ್ಧ ಕುದ್ರೋಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಜಾತ್ರೆಯಲ್ಲಿ ಮಟ್ಕಾ ಸೋಡಾ ವ್ಯಾಪಾರಿಗಳು ಜನರ ಆರೋಗ್ಯದ ಜೊತೆ ಆಟ ಆಡುತ್ತಿರುವ ದೃಶ್ಯವೊಂದನ್ನು ಗ್ರಾಹಕರು ಸೆರೆಹಿಡಿದಿದ್ದು ಅ ದೃಶ್ಯವು ವೈರಲ್ ಆಗಿದೆ.

ವೈರಲ್ ಆಗಿರುವ ದೃಶ್ಯದಲ್ಲಿ ವ್ಯಕ್ತಿಯೊಬ್ಬ ತನ್ನ ಕೊಳಕು ಕೈಗಳಿಂದ ಕಲುಷಿತ ನೀರಿನಲ್ಲಿ ಮಡಕೆಗಳನ್ನು ತೊಳೆದು ಅದರಲ್ಲಿಯೇ ಸೋಡ ಹಾಕಿ ಗ್ರಾಹಕರಿಗೆ ನೀಡಿದ್ದಾರೆ. ಇದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಮೂಲಕ ಗ್ರಾಹಕರ ಆರೋಗ್ಯದ ಜೊತೆ ಮಟ್ಕಾ ಸೋಡಾ ವ್ಯಾಪಾರಿಗಳು ಆಟ ಆಡುತ್ತಿರುವ ದೃಶ್ಯವೊಂದನ್ನು ಗ್ರಾಹಕರು ಸೆರೆಹಿಡಿದ್ದಾರೆ.

ಇದೀಗ ವಿಡಿಯೋ ವೈರಲ್ ಬೆನ್ನಲ್ಲೇ ಪಾಲಿಕೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿ ಮಟ್ಕಾ ಸೋಡಾ ಶಾಪ್ ಅನ್ನು ಸೀಝ್ ಮಾಡಿದ್ದಾರೆ. ಅಲ್ಲದೆ ಮಟ್ಕಾ ಸೋಡಾ ಪಾಟ್ ಸಹಿತ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕುದ್ರೋಳಿ ಜಾತ್ರೆಯ ಉಳಿದ ಸ್ಟಾಲ್ ಗಳಲ್ಲೂ ಶುಚಿತ್ವದ ಪರಿಶೀಲನೆ ನಡೆಸಿದ್ದು, ಶುಚಿತ್ವ ಕಾಪಾಡದೇ ಇದ್ದಲ್ಲಿ ಸ್ಟಾಲ್ ಸೀಝ್ ಮಾಡುವ ಎಚ್ಚರಿಕೆ ನೀಡಿದ್ದಾರೆ.


Share with

Leave a Reply

Your email address will not be published. Required fields are marked *