ಗೋಸಾಗಾಟ ಮಾಡುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ

Share with



ಬೆಳ್ತಂಗಡಿ: ಚಾರ್ಮಾಡಿ ಕಡೆಯಿಂದ ಕಾರಿನಲ್ಲಿ ಗೋ ಸಾಗಾಟ ನಡೆಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಗುರುವಾಯನಕೆರೆ ಮುಖ್ಯ ರಸ್ತೆಯಲ್ಲಿ ಅಪಘಾತ ನಡೆದ ಘಟನೆ ಆ.13 ರ ಬುಧವಾರ ನಡೆದಿದೆ.

ಆರೋಪಿಗಳು ಇನೋವಾ ಕಾರಿನಲ್ಲಿ ಗೋ ಸಾಗಾಟ ಮಾಡುತ್ತಿದ್ದರು. ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

2 ಗಂಟೆಯಿಂದ ಗುರುವಾಯನಕೆರೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂಚಾರ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಯಿತು. 2 ನಂಬರ್ ಪ್ಲೇಟ್ ಬಳಸಿ ಕೃತ್ಯ ನಡೆಸಲಾಗಿದ್ದು, ಅಪಘಾತದ ಪರಿಣಾಮ ಹಸು ರಸ್ತೆಯಲ್ಲೇ ಬಿದ್ದಿತ್ತು. ಅಪಘಾತದ ವೇಳೆ ಗೋ ಸಾಗಾಟ ಕೃತ್ಯ ಬೆಳಕಿಗೆ ಬಂದಿದೆ.


Share with

Leave a Reply

Your email address will not be published. Required fields are marked *