
ಮಂಗಳೂರು: ಕೇಂದ್ರ ಸರ್ಕಾರ ಬ್ಯಾನ್ ಮಾಡಿದ ಸಾವಿರ ಮತ್ತು ಐನೂರು ಮುಖ ಬೆಲೆಯ ನೋಟುಗಳು ಮಂಗಳೂರಿನ ಮೇರಿಹಿಲ್ ಮೈದಾನದಲ್ಲಿ ಪತ್ತೆಯಾಗಿದೆ.
ಬೆಳ್ಳಂಬೆಳಗ್ಗೆ ಮೈದಾನದ ಒಂದು ಮೂಲೆಯಲ್ಲಿದ್ದ ಚೀಲದಲ್ಲಿ ಇತರೆ ಕಸ, ತ್ಯಾಜ್ಯದ ಜೊತೆ ನೋಟುಗಳು ಕೂಡಾ ಕಂಡುಬಂದಿದೆ. ಆದರೆ ಸಂಜೆಯಾಗುತ್ತಲೇ ಅಲ್ಲಿದ್ದ ನೋಟಿನ ಕಂತೆ ನಾಪತ್ತೆಯಾಗಿದೆ. ಅಲ್ಲೇ ಯಾರಾದರೂ ನೋಡಿದವರು ಎಗರಿಸಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ. ಮಂಗಳೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.