ಉಪ್ಪಳ : ಗಾಳಿ. ಮಳೆಗೆ ವಿದ್ಯುತ್ ತಂತಿ ಮೇಲೆ ಮರ ಮುರಿದು ಬಿದ್ದು ರಸ್ತೆ ತಡೆ ಉಂಟಾದ ಘಟನೆ ನಡೆದಿದೆ. ಜುಲೈ 16ರಂದು ಬೆಳಿಗ್ಗೆ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪುಳಿಕುತ್ತಿ ಸ್ಮಶಾನ ರಸ್ತೆಯಲ್ಲಿ ಹಾದು ಹೋದ ವಿದ್ಯುತ್ ತಂತಿ ಮೇಲೆ ಬೃಹತ್ ಮರ ಮುರಿದು ಬಿದ್ದಿದೆ. ಇದರಿಂದ ವಿದ್ಯುತ್ ತಂತಿ ಸಡಿ ಲಗೊಂಡು ಸ್ಥಳೀಯರಲ್ಲಿ ಭೀತಿ ಉಂಟಾಗಿದ್ದು. ಪಂಚಾಯತ್ ಸದಸ್ಯೆ ಸುಧಾಗಣೇಶ್ ರವರು ಉಪ್ಪಳ ವಿದ್ಯುತ್ ಕಛೇರಿ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸಿಬ್ಬಂದಿಗಳು ತಲುಪಿ ವಿದ್ಯುತ್ ವಿಚ್ಚೇದಿಸಿದ ಬಳಿಕ ಊರವರು ಮರವನ್ನು ಕಡಿದು ತೆರವುಗೊಳಿಸಲಾಗಿದೆ. ಇದರಿಂದ ಅಪಾಯ ತಪ್ಪಿದೆ.