ಭತ್ತದ ಬೆಳೆ ನಾಶ ಮಾಡಿದ ಕಾಡಾನೆ.

Share with

ಹಾಸನ : ಜಿಲ್ಲೆಯ ಆಲೂರು ತಾಲೂಕು ಬೀಳಗವಳ್ಳಿ ಗ್ರಾಮದಲ್ಲಿ  ಭುವನೇಶ್ವರಿ ಆನೆಯ ಗುಂಪು ಜಾನ್ ಸಿರಿಲ್ ಕ್ರಾಸ್ತಾ ಎಂಬವರ ಸುಮಾರು 4 ಎಕರೆ ಭತ್ತದ ಬೆಳೆಯನ್ನು ನಾಶ ಮಾಡಿರುವುದಲ್ಲದೆ ಹಲವೆಡೆ ಕಾಫಿ ಅಡಿಕೆ ಹಾಗೂ ತೆಂಗಿನ ಸಸಿಗಳನ್ನು ನಾಶ ಮಾಡಿರುವ ಘಟನೆ ನಡೆದಿದೆ.

ಸಮಾಜ ಸೇವಕ ಮಂಜುನಾಥ್ ಕಾಮತಿ ಮಾತನಾಡಿ ಮನುಷ್ಯ ಮತ್ತು ಆನೆಯ ಸಂಘರ್ಷ ಹೊಸತೇನಲ್ಲ ಹಲವು ವರ್ಷಗಳ ಬವಣೆ ಇದಾಗಿದೆ ಪ್ರಾಣ ಹಾನಿ ಸಂಭವಿಸುವುದಕ್ಕಿಂತ ಮುಂಚೆ ಆನೆಗಳನ್ನು ಸ್ಥಳಾಂತರ ಮಾಡಿ ರೈತರ ಹಾಗೂ ಕೂಲಿ ಕಾರ್ಮಿಕರ ನೆಮ್ಮದಿ ಬದುಕಿಗೆ ದಾರಿ ಮಾಡಿಕೊಡಿ ಎಂದರು.

ಮಾಜಿ ಸೈನಿಕ ಹಾಗೂ ರೈತ ಸಿರಿಲ್ ಕ್ರಾಸ್ತ ರವರು ಮಾತನಾಡಿ ನಾಲ್ಕು ಆನೆಯ ಗುಂಪು  ನಾಲ್ಕೈದು ಎಕರೆ ಬತ್ತದ ಬೆಳೆಯನ್ನು ನಾಶ ಮಾಡಿರುವಂಥದ್ದು ನಮ್ಮ ಬದುಕಿಗೆ ಸಿಡಿಲು ಬಡಿದಂತಾಗಿದೆ ಕಷ್ಟಪಟ್ಟು ಮಾಡಿರುವ ಬೆಳೆಯನ್ನ ಆನೆಗಳು ಹಾನಿ ಮಾಡಿ ಮಣ್ಣು ಪಾಲು ಮಾಡಿವೆ ಈ ಸಂಬಂಧ ಅರಣ್ಯ ಅಧಿಕಾರಿಗಳು ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಿ ಆನೆಗಳನ್ನು ಸ್ಥಳಾಂತರ ಮಾಡಿ ನಮಗೆ ಜೀವ ಕಲ್ಪ ಮಾಡಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಕಾಫಿ ಬೆಳೆಗಾರರಾದ ಗೋಪಿಕೃಷ್ಣರವರು ಮಾತನಾಡಿ. ರೈತರಿಗೆ ತೊಂದರೆ ಕೊಡುತ್ತಿರುವ ಆನೆಗಳನ್ನು  ಸ್ಥಳಾಂತರ ಮಾಡಿ ಇಲ್ಲವೇ ರೈತರಿಗೆ ರಕ್ಷಣೆ ನೀಡಿ ಎಂದರು.


Share with

Tags:

Leave a Reply

Your email address will not be published. Required fields are marked *