ಉಪ್ಪಳ: ಹಳಿದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಮಹಿಳೆಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಉಪ್ಪಳ ರೈಲ್ವೇ ನಿಲ್ದಾಣ ಬಳಿಯ ನಿವಾಸಿ [ದಿ] ಪರಮೇಶ್ವರ [ದಿ] ಪುತ್ತಮ್ಮರವರ ಪುತ್ರಿ ಚಂದ್ರಾವತಿ [53] ಮೃತಪಟ್ಟಿದ್ದಾರೆ. ಜ.3ರಂದು ಸಂಜೆ ಸುಮಾರು 6.15ರ ವೇಳೆ ಘಟನೆ ನಡೆದಿದೆ.

![ಉಪ್ಪಳ ರೈಲ್ವೇ ನಿಲ್ದಾಣ ಬಳಿಯ ನಿವಾಸಿ [ದಿ] ಪರಮೇಶ್ವರ [ದಿ] ಪುತ್ತಮ್ಮರವರ ಪುತ್ರಿ ಚಂದ್ರಾವತಿ](https://veekshakavani.com/wp-content/uploads/2024/01/ಚಂದ್ರಾವತಿ-.jpg)
ಸಮುದ್ರ ತೀರದಲ್ಲಿರುವ ತರವಾಡು ಮನೆಯಿಂದ ಮನೆಗೆ ತೆರಳುತ್ತಿದ್ದಾಗ ಮನೆ ಪರಿಸರದ ಹಳಿದಾಟುತ್ತಿದ್ದಂತೆ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲು ಗಾಡಿ ಡಿಕ್ಕಿ ಹೊಡೆದ ರಭಸಕ್ಕೆ ಪರಿಸರದ ಹೊಂಡಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದೆನ್ನಲಾಗಿದೆ.
ಇವರಿಗೆ ಕಿವಿ ಕೇಳಿಸುವುದು ತೀರಾ ಕಡಿಮೆಯಾಗಿದ್ದು ರೈಲು ಗಾಡಿ ಆಗಮಿಸಿದ್ದು ಗಮನಕ್ಕೆ ಬಂದಿರಲಿಲ್ಲವೆಂದು ಅಂದಾಜಿಸಲಾಗಿದೆ. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮಂಜೇಶ್ವರ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತರು ಅವಿವಾಹಿತರಾಗಿದ್ದಾರೆ. ಸಹೋದರ ಶಶಿ ಮಾಸ್ತರ್, ಸಹೋದರಿಯರಾದ ಮೀನಾಕ್ಷಿ, ಜಯಂತಿ, ವಸಂತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ಬಾಲಕೃಷ್ಣ ಈ ಹಿಂದೆ ನಿಧನರಾಗಿದ್ದಾರೆ.




