ಕಾಸರಗೋಡು : ನಾಲ್ಕು ವರ್ಷದ ಪುತ್ರ ಹಾಗೂ ಪತಿಯನ್ನು ಬಿಟ್ಟು ತನಗಿಂತ ಎರಡು ವರ್ಷ ಚಿಕ್ಕವನಾದ ಪ್ರಿಯತಮನೊಂದಿಗೆ ಪರಾರಿಯಾಗಿದ್ದ ಮಹಿಳೆ, ಪೊಲೀಸರು ನೀಡಿದ ಉಪದೇಶದಿಂದ ಮನಸ್ಸು ಬದಲಾಯಿಕೊಂಡು ಪತಿ ಹಾಗೂ ಪುತ್ರನ ಜತೆಗೆ ತೆರಳಿದ್ದಾರೆ.
ಕರಿಂದಳಂ ಚಾವಕ್ಕಳುಯದ 26ರ ಹರೆಯದ ಮಹಿಳೆ ಪಯ್ಯನ್ನೂರು ನಿವಾಸಿಯಾದ 24ರ ಹರೆಯದ ಯುವಕನ ಜತೆ ರವಿವಾರ ಪರಾರಿಯಾಗಿದ್ದರು. ಯುವಕ ಕೇಬಲ್ ಟಿವಿ ಕಾರ್ಮಿಕನಾಗಿದ್ದಾನೆ. ಪತ್ನಿ ನಾಪತ್ತೆಯಾದ ಬಗ್ಗೆ ನೀಡಿದ ದೂರಿನಂತೆ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದರು.
ತನಿಖೆಯ ಅಂಗವಾಗಿ ಪೊಲೀಸರು ಪ್ರಿಯತಮನ ಮನೆಗೆ ಹೋಗಿ ನೋಡಿದಾಗ ಜೋಡಿ ಅಲ್ಲಿರಲಿಲ್ಲ. ಇವರ ಫೋನ್ ಸ್ವಿಚ್ ಆಫ್ ಆಗಿತ್ತು. ಮನೆಯಿಂದ ಲಭಿಸಿದ ಫೋನ್ ನಂಬರ್ ಅನ್ನು ಸಂಪರ್ಕಿಸಿದಾಗ ಪರಶ್ಶಿನಕಡವಿನಲ್ಲಿ ಇರುವುದಾಗಿ ತಿಳಿಸಿದ್ದರು. ಇವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿ, ಉಪದೇಶ ನೀಡಿದ್ದರಿಂದ ಇಬ್ಬರೂ ಮನಸ್ಸು ಬದಲಾಯಿಸಿಕೊಂಡರು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮಹಿಳೆ ಪತಿ ಹಾಗೂ ಪುತ್ರನ ಜತೆ ತೆರಳುವುದಾಗಿ ಹೇಳಿದರು.