ಮಂಗಳೂರು ಮೂಲದ ಯುವಕ ಸೌದಿಯಲ್ಲಿ ಸಾವು

Share with

ಮಂಗಳೂರು: ಜೋಕಟ್ಟೆ ಕೆಬಿಎಸ್‌ ನಿವಾಸಿ ಇರ್ಷಾದ್‌ (33) ಹೃದಯಾಘಾತಕ್ಕೊಳಗಾಗಿ ಸೌದಿ ಅರೆಬಿಯಾದ ಅಲ್ ಕೋಬರ್ ನಲ್ಲಿ ನ.2ರಂದು ಬೆಳಗ್ಗೆ ಮೃತಪಟ್ಟಿರುವ ಘಟನೆ ವರದಿಯಾಗಿದೆ. 

ಜೋಕಟ್ಟೆ ಕೆಬಿಎಸ್‌ ನಿವಾಸಿ ಇರ್ಷಾದ್‌.

ಜೋಕಟ್ಟೆ ಕೆಬಿಎಸ್‌ ನಿವಾಸಿ ಅಬ್ದುಲ್‌ ರಝಾಕ್‌ ಅವರ ಮಗ ಇರ್ಶಾದ್‌ 7ವರ್ಷಗಳಿಂದ ಸೌದಿ ಅರೆಬಿಯಾದ ಅಲ್‌ ಕೋಬರ್‌ ನಲ್ಲಿ ಇಲೆಕ್ಟ್ರಾನಿಕ್‌ ಅಂಗಡಿಯೊಂದರಲ್ಲಿ ಕೆಲಸಕ್ಕೆ ಇದ್ದರು. ಇತ್ತೀಚೆಗೆ ತಾಯ್ನಾಡಿಗೆ ಬಂದು ಸೌದಿ ಅರೆಬಿಯಾಕ್ಕೆ ತೆರಳಿದ್ದರು ಎನ್ನಲಾಗಿದೆ. 

ನ.2ರಂದು ಬೆಳಗ್ಗೆ ಇರ್ಶಾದ್‌ ಅವರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಇರ್ಶಾದ್‌ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *