ಪುತ್ತೂರು: ಸ್ನೇಹಿತರ ಜೊತೆ ಕೇರಳ ಪ್ರವಾಸಕ್ಕೆ ತೆರಳಿದ್ದ ಪುತ್ತೂರಿನ ಯುವಕನೊಬ್ಬ ಕೇರಳದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಣ್ಣೂರಿನ ಕಡಂಬೆರಿಯಲ್ಲಿ ನಡೆದಿದೆ.
ಪುತ್ತೂರಿನ ಉಪ್ಪಿನಂಗಡಿಯ ಹಿರೇಬಂಡಾಡಿ ನಿವಾಸಿ ಮಹಮ್ಮದ್ ಅಝೀಮ್(21) ಮೃತ ಯುವಕ ಎಂದು ಗುರುತಿಸಲಾಗಿದ್ದು, ಕಣ್ಣೂರಿನ ಕಡಂಬೆರಿಯಲ್ಲಿ ಈಜಲೆಂದು ತೆರಳಿದ್ದ ವೇಳೆ ಈ ದುರಂತ ನಡೆದಿದೆ.
ಪುತ್ತೂರಿನಿಂದ ಐವರು ಸ್ನೇಹಿತರು ಕೇರಳಕ್ಕೆ ಪ್ರವಾಸಕ್ಕೆ ತೆರಳಿದ್ದು, ಈ ವೇಳೆ ಈಜಲೆಂದು ನೀರಿಗಿಳಿದ ಮಹಮ್ಮದ್ ಅಝೀಮ್ ನೀರಿನ ಆಳ ತಿಳಿಯದೆ ಈಜಲು ಆಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಮಹಮ್ಮದ್ ಅಝೀಮ್ ಗೆ ಸರಿಯಾಗಿ ಈಜು ಬಾರದೇ ಸಾವನ್ನಪ್ಪಿದ್ದರೆ, ಇನ್ನೊಬ್ಬನನ್ನು ಕಡಂಬೆರಿಯ ಸ್ಥಳೀಯ ನಿವಾಸಿಗಳು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.