ತೆಲಂಗಾಣ: ಹುಚ್ಚು ಸಾಹಸ ಮಾಡಲು ಹೋಗಿ ಪ್ರಾಣವನ್ನು ಕಳೆದುಕೊಳ್ಳುವ ಎಷ್ಟೋ ಘಟನೆಗಳು ಪ್ರತಿದಿನ ವರದಿಯಾಗುತ್ತವೆ. ಇಂಥದ್ದೇ ಒಂದು ಘಟನೆ ತೆಲಂಗಾಣದಲ್ಲಿ ಶುಕ್ರವಾರ(ಸೆ.6ರಂದು) ನಡೆದಿದೆ.
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬನ್ಸವಾಡ ಮಂಡಲದ ದೇಸಾಯಿಪೇಟ್ ಗ್ರಾಮದ ಹಾವಾಡಿಗನೊಬ್ಬನ ಮಗ ಶಿವ ಎಂಬಾತ ಗ್ರಾಮದ ಕಾಲೋನಿಗೆ ಪ್ರವೇಶಿಸಿದ 6 ಅಡಿಯ ನಾಗರ ಹಾವನ್ನು ಹಿಡಿದು ಗ್ರಾಮದಿಂದ ಹೊರಗೆ ಬಿಡಲು ತೆಗೆದುಕೊಂಡು ಹೋಗುವ ವೇಳೆ ಹುಚ್ಚು ಸಾಹಸವನ್ನು ಮಾಡಿದ್ದಾನೆ.
ಹಾವನ್ನು ಹಿಡಿದುಕೊಂಡು ಅದನ್ನು ಬಾಯಿಯಲ್ಲಿ ಕಚ್ಚಿ ಹಿಡಿದಿದ್ದಾನೆ. ಇದನ್ನು ಅಲ್ಲಿದ್ದವರು ಅಚ್ಚರಿಗೊಂಡು ವಿಡಿಯೋ ಹಾಗೂ ಫೋಟೋ ತೆಗೆದಿದ್ದಾರೆ. ಆದರೆ ಬಾಯಿಯೊಳಗೆ ಹೋದ ಹಾವು ಶಿವನಿಗೆ ಕಚ್ಚಿದ್ದು, ಇದು ಶಿವನ ಗಮನಕ್ಕೆ ಬಂದಿರುವುದಿಲ್ಲ.