
ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಮೂರ ದಿನಗಳ ಹಿಂದೆ ಹಸೆಮಣೆ ಏರಿದ್ದ ಯುವಕ ಶಶಾಂಕ್ (28) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಪುತ್ರ ಶಶಾಂಕ್, ಜಾರ್ಖಂಡ್ ಮೂಲದ ಯುವತಿಯನ್ನು ಪ್ರೀತಿಸಿ ಕಳೆದ ವಾರವಷ್ಟೇ ಮದುವೆಯಾಗಿದ್ದರು. ಮದುವೆಯಾದ ಬೆನ್ನಲ್ಲೇ ಶಶಾಂಕ್ ಇಹಲೋಕ ತ್ಯಜಿಸಿದ್ದು, ಮದುವೆ ಸಂಭ್ರಮದಲ್ಲಿದ್ದ ಪೋಷಕರು ಆಘಾತಗೊಂಡಿದ್ದಾರೆ. ಇಂದು ಕೆ.ಆರ್.ಪೇಟೆಯಲ್ಲಿ ಶಶಾಂಕ್ ಅಂತ್ಯಸಂಸ್ಕಾರ ನಡೆಯಲಿದೆ.