ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ!

Share with

dead

ಉಡುಪಿ: ಮನುಷ್ಯ ತನಗೆ, ತನ್ನವರಿಗೆ ಆಸ್ತಿ ಮಾಡೊದರಲ್ಲೆ ಆಯಸ್ಸು ಕಳೆದು ಬಿಡುತ್ತಾನೆ. ಸಾವಿರಾರು ಕನಸು ಕಾಣುತ್ತಿದ್ದ ಯುವಕನೊಬ್ಬ ತನ್ನದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡ ಘಟನೆ ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಆದರೆ ಈ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

ಬುಧವಾರ ಮಧ್ಯಾಹ್ನ ಉದ್ಯಾವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸಿನಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದ ವೇಳೆ ಯುವಕನೋರ್ವನಿಗೆ ಟಿಪ್ಪರ್ ಲಾರಿಯೊಂದು ಡಿಕ್ಕಿಯಾಗಿತ್ತು.ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ಕೂಡಲೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿನ್ನಪ್ಪಿರುವ ಘಟನೆ ನಡೆದಿದೆ.

ಈ ಸಾವು ನ್ಯಾಯವೇ ಎಂದು ಯುವಕನ ತಾಯಿ, ತಂಗಿ, ಸ್ನೇಹಿತರು ಬಂದು ಬಳಗ ಕಣ್ಣೀರು ಹಾಕುತ್ತಿದ್ದಾರೆ.

ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ಯುವಕನ ಸಾವಿನ ಕ್ಷಣದವರೆಗೂ ಯುವಕನ ಸ್ನೇಹಿತರು ಹಾಗೂ ಸಮಾಜ ಸೇವಕಿ ಗೀತಾಂಜಲಿ ಸುವರ್ಣ ಜೊತೆಗಿದ್ದು, ಯುವಕನ ಪ್ರಾಣ ಉಳಿಸೊಕೆ ಪ್ರಯತ್ನಪಟ್ಟಿದ್ರು. ಆದರೆ ಪ್ರಯತ್ನದಲ್ಲಿ ಫಲ ಸಿಗಲಿಲ್ಲ. ವಿಧಿಯ ಕೂರ ಆಟಕ್ಕೆ ಪ್ರಶಾಂತ್ ಎಂಬ ಯುವಕನ ಪ್ರಾಣ ಹೋಗಿದೆ.

ಸ್ನೇಹಿತರು ಮತ್ತು ಕುಟುಂಬ ವರ್ಗದವರು ಮೃತ ಪ್ರಶಾಂತ್ ಅವರ ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿದ್ದಾರೆ . ನಾನೇನಾದರೂ ಸತ್ತರೆ ನನ್ನ ಅಂಗಾಂಗ ದಾನ ಮಾಡಿ ನನ್ನಿಂದ ಒಂದಷ್ಟು ಜನರಿಗೆ ಉಪಕಾರವಾಗಲಿ ಎಂಬ ಆಸೆಯನ್ನು ಸ್ನೇಹಿತರ ಬಳಿ ಈ ಹಿಂದೆ ಹೇಳಿಕೊಂಡಿದ್ದನಂತೆ ಪ್ರಶಾಂತ್.

ಪ್ರಶಾಂತ್ ರ ಅಂಗಾಂಗಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾನ ಮಾಡಲಾಗಿದೆ. ಪ್ರಶಾಂತನ ಕಣ್ಣು ಈಗಾಗಲೇ ಮಣಿಪಾಲ ಆಸ್ಪತ್ರೆಯ ಒಬ್ಬ ರೋಗಿಗೆ ಜೋಡಿಸಿದ್ದಾರೆ. ಕಿಡ್ನಿಯನ್ನು ಬೆಂಗಳೂರಿಗೆ ರವಾನಿಸಲಾಗಿದೆ.


Share with

Leave a Reply

Your email address will not be published. Required fields are marked *