ದೀಪಾವಳಿಯಂದು ದೀಪ ಹಚ್ಚಲು ಹೋದ ಯುವಕ ಅಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು..!!

Share with

ಹೆಬ್ರಿ: ದೀಪಾವಳಿ ಹಬ್ಬದ ಪ್ರಯುಕ್ತ ಗದ್ದೆ ಹಾಗೂ ಬಾವಿಗೆ ದೀಪ ಇಡಲು ಹೋದಾಗ ಅಕಸ್ಮಿಕವಾಗಿ ಬಾವಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನ. 12ರಂದು ಸಂಜೆ ಹೆಬ್ರಿ ತಾಲೂಕು ಚಾರ ಗ್ರಾಮದ ಚಾರ ಬಸದಿ ಬಳಿ ನಡೆದಿದೆ ಎಂದು ವರದಿಯಾಗಿದೆ.

ಮೃತಪಟ್ಟ ಯುವಕನನ್ನು ಸಚಿನ್ (35) ಎಂದು ಗುರುತಿಸಲಾಗಿದೆ. ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *